ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆನ್ ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ದಿನಾಂಕ 22 -01 – 2021 ರಿಂದ ಅವಕಾಶ ಕಲ್ಪಿಸಲಾಗಿದ್ದು, ಕೊನೆಯ ದಿನಾಂಕ 22 – 02 – 2021 ಆಗಿರುತ್ತದೆ . ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು 24-02-2021 ಕೊನೆಯ ದಿನಾಂಕವಾಗಿರುತ್ತದೆ. ನೇಮಕಾತಿಯ ಕುರಿತಾದ ಅಧಿಸೂಚನೆಯ ನಿಯಮಗಳು ಮತ್ತು ಅರ್ಜಿ ಸಲ್ಲಿಸಲು ಇಲಖೆಯ ಅಧಿಕೃತ ವೆಬ್ ಸೈಟ್ www.recruitment.ksp.gov.in ಸಂಪರ್ಕಿಸ ಬಹುದು.