ಕುಂದಾಪುರ (ಡಿ.31):ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ ಮಂಡಾಡಿ (ಸುಣ್ಣಾರಿ) ಹೊಸ ಕಲಿಕಾ ಪದ್ಧತಿಯ ಅನ್ವಯ ಆಧುನಿಕ ಶೈಲಿ “ಇ-ಕಲಿಕಾ” (E-Learning) ತರಗತಿಯನ್ನು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಶ್ರೀ ರಮಾನಂದ ಶೆಟ್ಟಿ ಸುಣ್ಣಾರಿ ಉದ್ಘಾಟಿಸಿದರು.
ಶಾಲಾ ಸಂಚಾಲಕರಾದ ಸುಣ್ಣಾರಿ ಶ್ರೀ ಕಿಶೋರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ರತ್ನಾಕರ ಶೆಟ್ಟಿ, ಶ್ರೀ ವಿ. ಚಂದ್ರಶೇಖರ ಹೆಗ್ಡೆ, ಶ್ರೀ ಕೆ. ಸಂಜೀವ ಶೆಟ್ಟಿ, ಶ್ರೀ ಪ್ರಸನ್ನಕುಮಾರ ಶೆಟ್ಟಿ, ಶ್ರೀ ಎಸ್. ಮಂಜು, ಶಾಲಾ ಶೈಕ್ಷಣಿಕ ಸಲಹೆಗಾರರಾದ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ, ಪಂಚಾಯತ್ ಸದಸ್ಯರಾದ ಶ್ರೀ ಗಣೇಶ ಶೆಟ್ಟಿ, ಶ್ರೀ ಸಚಿನ್ ಕುಮಾರ್ ಶೆಟ್ಟಿ, ಹಿರಿಯರಾದ ಡಾ. ಶ್ರೀ ಮೋಹನದಾಸ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ಸೇರಿಗಾರ, ಹೊಂಬಾಡಿ-ಮಂಡಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಚಂದ್ರಕಾಂತ,ಶಾಲಾ ಶಿಕ್ಷಕರಾದ ಶ್ರೀಮತಿ ನೀತಾ ಶೆಟ್ಟಿ, ಶ್ರೀಮತಿ ಪೂರ್ಣಿಮಾ, ಕುಮಾರಿ ಆರತಿ, ಶ್ರೀಮತಿ ರಾಧಾ, ಶ್ರೀಮತಿ ರಾಜಶ್ರೀ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶ್ರೀ ರಘುರಾಮ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಸರೋಜಿನಿ ವಂದಿಸಿದರು. ಶಿಕ್ಷಕರಾದ ಶ್ರೀ ಸಂದೀಪ ಕಾರ್ಯಕ್ರಮ ನಿರೂಪಿಸಿದರು.