ಕೋಟ(ಜ.2): ಕೋಟತಟ್ಟು ಗ್ರಾಮದಲ್ಲಿ ಪೊಲೀಸ್ ಲಾಠಿಚಾರ್ಜ್ ಗೊಳಗಾದ ಕೊರಗ ಸಮುದಾಯವರನ್ನು ರಾಜ್ಯ ಗ್ರಹ ಸಚಿವ ಅರಗ ಜ್ಙಾನೇಂದ್ರರವರು ಜ.01 ರಂದು ಭೇಟಿ ಮಾಡಿ ಸಾಂತ್ವನ ಹೇಳಿದರು.

ಗಾಯಗೊಂಡವರಿಗೆ ₹2 ಲಕ್ಷ ಪರಿಹಾರ ಘೋಷಿಸಿ, ಪ್ರತಿ ಕುಟುಂಬಕ್ಕೆ ₹50,000 ಪರಿಹಾರ ನೀಡಿದರು. ಪೊಲೀಸ್ ದೌರ್ಜನ್ಯ ಪ್ರಕರಣ ಕುರಿತು ಸಿ.ಓ.ಡಿ ತನಿಖೆ ನಡೆಸಲಾಗುವುದು ಎಂದು ತಿಳಿಸುತ್ತಾ, ಕೊರಗ ಕುಟುಂಬದವರ ವಿವಾಹ ಸಮಾರಂಭದಲ್ಲಿ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಕೊರಗ ಕುಟುಂಬದ ಸದಸ್ಯರ ವಿರುದ್ಧ ದಾಖಲಾದ ಪೊಲೀಸ್ ಮೊಕದ್ದಮೆ ಹಿಂಪಡೆಯುವ ಕ್ರಮ ವಹಿಸುವುದಾಗಿ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಶ್ರೀಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.











