ತೆಕ್ಕಟ್ಟೆ(ಜ.3): ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆಯ ಹಿನ್ನೆಲೆಯಲ್ಲಿ ಮಾಲಾಡಿ ಗಣಪತಿ ವೆಂಕಟೇಶ್ ಶ್ಯಾನ್ ಭೊಗ್ ಇವರ ಸೇವೆಯ ಸ್ಮರಣಾರ್ಥ ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್,ಉಸಿರು ಕೋಟ,ಅರಿವು ಪ್ರತಿಷ್ಠಾನ ಹಾಗೂ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಾಲಾಡಿ ಗಣಪತಿ ವೆಂಕಟೇಶ್ ಶ್ಯಾನ್ ಭೊಗ್ ರವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮಫಲಕವನ್ನು ಶ್ರೀಯುತ ಹರೀಶ್ ಕುಮಾರ್ ಶೆಟ್ಟಿ ಯವರು ಅನಾವರಣಗೊಳಿಸಿದರು .
ಈ ವೇಳೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸತೀಶ್ ಪೂಜಾರಿ ವಡ್ಡಸೆ೯ ಭಾಗವಹಿಸಿ ಸ್ವಾತಂತ್ರ ಹೋರಾಟದಲ್ಲಿ ಕರಾವಳಿಗರ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು . ಮುಖ್ಯ ಅತಿಥಿಯಾಗಿ ನರೇಂದ್ರ ಕುಮಾರ್ ಕೋಟ,ನಿತ್ಯಾನಂದ ಶೆಣೈ, ಸತೀಶ್ ಆಚಾಯ೯ ಗುಂಡ್ಮಿ ಸ್ವರಾಜ್ಯ ೭೫” ರ ಉಡುಪಿ ತಾಲೂಕು ಕಾಯ೯ಕ್ರಮದ ಸಂಚಾಲಕರು, ಶ್ರೀಮತಿ ಮಮತಾ ದೇವಾಡಿಗ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ,ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಶ್ರೀ ಗಣಪತಿ ಮಾಲಾಡಿ ,ಶ್ರೀ ಮಲ್ಯಾಡಿ ಶಿವರಾಮ್ ಶೆಟ್ಟಿ,ಶ್ರೀ ಗಿರೀಶ್ ಶೆಟ್ಟಿ,ಶ್ರೀ ಪುರಂದರ ತೆಕ್ಕಟ್ಟೆ,,ಶ್ರೀ ರಾಘವೇಂದ್ರ ಹಕಾ೯ಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸ್ವರಾಜ್ಯ ೭೫ ಕಾಯ೯ಕ್ರಮ ಸಂಚಾಲಕರಾದ ಶ್ರೀ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಶಾಲತಾ ಮರವಂತೆ ನಿರೂಪಿಸಿದರು.