ಉಡುಪಿ(ಜ.26): ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ 16ನೇ ವಾರ್ಷಿಕ ಮಹಾಸಭೆ ಜ. 26 ರಂದು ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಜರುಗಿತು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್’ನ ಪ್ರವರ್ತಕರಾದ ನಾಡೋಜ ಡಾ. ಜಿ ಶಂಕರ್ ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮೊಗವೀರ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶಿವರಾಮ ಕೆ.ಎಂ. ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪಾಂಡುರಂಗ ಬೈಂದೂರು ಲೆಕ್ಕಪತ್ರ ಮಂಡನೆ ಮಾಡಿದರು. ವರದಿ ಹಾಗೂ ಲೆಕ್ಕಪತ್ರಕ್ಕೆ ಸಭೆಯಿಂದ ಅನುಮೋದನೆಯನ್ನು ಪಡೆಯಲಾಯಿತು. ತದನಂತರ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸಭೆಯಲ್ಲಿ ನಡೆಯಿತು.
ಮುಂದಿನ ಎರಡು ವರ್ಷಗಳ ಸಾಲಿಗೆ ನೂತನ ಅಧ್ಯಕ್ಷರಾಗಿ ರಾಜೇಂದ್ರ ಹಿರಿಯಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವೀಶ್ ಎಸ್. ಕೊರವಡಿಯವರು ನಿಯೋಜನೆಗೊಂಡರು. ದ.ಕ ಜಿಲ್ಲ ಮೊಗವೀರ ಮಹಾಜನ ಸಂಘ (ರಿ.) ಉಚ್ಛಿಲ ಇದರ ಅಧ್ಯಕ್ಷರಾದ ಜಯಾ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಇದರ ನಿಕಟಪೂರ್ವ ಅಧ್ಯಕ್ಷರಾದ ವಿನಯ್ ಕರ್ಕೇರಾ ಮಲ್ಪೆ, ಸ್ಥಾಪಕ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಮಾಜಿ ಅಧ್ಯಕ್ಷರುಗಳಾದ ಸಂಜೀವ ಎಂ.ಎಸ್, ಸದಾನಂದ್ ಬಳ್ಕೂರು, ಗಣೇಶ್ ಕಾಂಚನ್, ಮೊಗವೀರ ಯುವ ಸಂಘಟನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಗೌರವ ಸಲಹೆಗಾರು, ವಿವಿಧ ಘಟಕಗಳ ಅಧ್ಯಕ್ಷರು/ಸರ್ವ ಸದಸ್ಯರು, ಮಹಿಳಾ ಸಂಘಟನೆಯ ಅಧ್ಯಕ್ಷರು/ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಘಟನೆ ಹಾಲಿ ಅಧ್ಯಕ್ಷರಾದ ಶಿವರಾಮ್ ಕೆ. ಎಮ್ ಅವರನ್ನು ನಾಡೋಜ ಜಿ. ಶಂಕರ್ ರವರು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಜಿಲ್ಲಾ ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷರಾದ ವಿನಯ್ ಕರ್ಕೇರಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ ವಂದಿಸಿದರು.ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಅಶೋಕ್ ತೆಕ್ಕಟ್ಟೆಯವರು ಕಾರ್ಯಕ್ರಮ ನಿರೂಪಿಸಿದರು.