ಡಾ. ಗೋವಿಂದ ಬಾಬು ಪೂಜಾರಿ ಇವರ ಹೆಸರು ಕೇಳದೆ ಇರುವವರು ಅತೀ ವಿರಳ. ಕನಾರ್ಟಕದ ಕರಾವಳಿ ಭಾಗದಿಂದ ಹಿಡಿದು ವಿವಿದ ರಾಜ್ಯಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತಾರ ಮಾಡಿದ ಉದ್ಯಮ ಸಾಹಸಿ .ಕಡು ಬಡತನದಲ್ಲಿ ಜನಿಸಿದ ಇವರು ತಮ್ಮ ಸ್ವ ಪರಿಶ್ರಮದಿಂದನೆ ದುಡಿದು ಬಹುದೊಡ್ಡ ಯುವ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಡಾ.ಗೋವಿಂದ ಪೂಜಾರಿಯವರು ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿರಿಸಿ ಕಡುಬಡವರು, ಅನಾರೋಗ್ಯ ಪೀಡಿತರು, ನಿರ್ಗತಿಕರು, ವಸತಿರಹಿತರ ಪಾಲಿಗೆ ಆಪತ್ಭಾಂದರಾಗಿದ್ದಾರೆ. ಯಾವುದೇ ಜಾತಿ, ಮತ, ಧರ್ಮ ಬೇಧ-ಭಾವವಿಲ್ಲದೆ ಸಹಾಯಹಸ್ತ ನೀಡುವ ಜನಸೇವೆಯಲ್ಲಿ ನಿಂತ ಸರಳ ವ್ಯಕ್ತಿತ್ವ ಡಾ.ಗೋವಿಂದ ಬಾಬು ಪೂಜಾರಿ. ವಸತಿ ರಹಿತ ಕಡುಬಡತನದ ಆರು ಕುಟುಂಬಗಳಿಗೆ ಸುರು ಕಟ್ಟಿ ನೆರಳು ನೀಡಿ, ಇನ್ನೂ ನಾಲ್ಕು ಬಡ ಕುಟುಂಬಗಳಿಗೆ ನೆರಳು ನೀಡುವ ಕೆಲಸಗಳು ಸಾಗುತ್ತಿರವುದು ತುಂಬಾ ಸಂತೋಷದ ಸಂಗತಿ. ಇಂತಹ ಮಹತ್ವದ ಗಟ್ಟಿ ನಿರ್ಧಾರ ತೆಗೆದುಕೊಂಡು ಸರ್ಕಾರಗಳು ಮಾಡದಿರುವ ಕೆಲಸ ಗೋವಿಂದ ಪೂಜಾರಿಯವರು ತಮ್ಮ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ ಮೂಲಕ ಮಾಡಿ ತೊರಿಸಿದ್ದಾರೆ.

ಸಮಾಜಮುಖ ಕಾರ್ಯಕ್ರಮಗಳೊಂದಿಗೆ ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆ ಔಷಧೋಪಚಾರದ ಖರ್ಚು ಭರಿಸುವ ಮಹತ್ಕಾರ್ಯದಲ್ಲಿ ನಿರತರಾದ ಇವರು ಇತಿಚೇಗೆ ತಲೆಸೇಮಿಯಾ ಕಾಯಿಲೆಯಿಂದ ಸಾವು ಬದುಕಿನೊಂದಿಗೆ ಹೋರಾಡುತಿದ್ದ ಮಗುವನ್ನು ಬೆಂಗಳೂರಿನಲ್ಲಿ 6 ತಿಂಗಳು ಸ್ವತಹ ತನ್ನ ಮನೆಯಲ್ಲೇ ಇಟ್ಟುಕೊಂಡು ಒಂದು ಕಾರ್ & ಡ್ರೈವರ್ ನೀಡಿ ಎಲ್ಲಾ ರೀತಿಯ ವ್ಯವಸ್ಥೆ ನೀಡಿ ಬದುಕಿಸಲು ಕಷ್ಟವೆನಿಸಿದ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ.

ಡಾ.ಗೋವಿಂದ ಬಾಬು ಪೂಜಾರಿ ಆರು ತಿಂಗಳು ಅಷ್ಟು ದೊಡ್ಡ ಕಾಯಿಲೆಯಲ್ಲಿ ಬಳಲುತ್ತಿದ್ದ ಮಗುವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಸಾಕಿ ಸುಲುಹಿ ಶಸ್ತ್ರಚಿಕಿತ್ಸೆ ಕೊಡಿಸಿ ಆಪರೇಶನ್ ಸಕ್ಸಸ್ ಮಾಡಿಸಿ ಪುನರ್ಜನ್ಮ ಕೊಡಿಸಿ ಊರಿಗೆ ಕರೆದುಕೊಂಡು ಬಂದು ತಾವು ನೀಡಿದ ಭರವಸೆ ಹುಸಿಯಾಗದಂತೆ ನಡೆದುಕೊಂಡಿದ್ದಾರೆ. ಈ ಮಹಾನ್ ಕಾರ್ಯಕ್ಕೆ ಇಡೀ ಕರಾವಳಿಯ ಜನತೆ ಡಾ.ಗೋವಿಂದ ಬಾಬು ಪೂಜಾರಿಯವರನ್ನು ಮುಕ್ತ ಕಂಟದಿಂದ ಶ್ಲಾಘಿಸಿದೆ.
ಸ್ವಾರ್ಥಪರತೆಯಿಂದ ಕೂಡಿದ ಈ ಆಧುನಿಕ ಕಾಲಘಟ್ಟದಲ್ಲಿ ತಾವು ತಮ್ಮ ಮನೆ ಸಂಸಾರವನ್ನು ನೋಡಿಕೊಂಡು ಬದುಕುವ ಜನತ ನಡುವೆ ನೊಂದವರು, ಬಡವರು,ಅನಾರೋಗ್ಯ ಪೀಡಿತರು ಶಿಕ್ಷಣ ರಹಿತರಿಗೆ ಸಹಾಯ ಮಾಡುವ ಗೋವಿಂದ ಬಾಬು ಪೂಜಾರಿಯವರು ಮಾದರಿ ವ್ಯಕ್ತಿತ್ವ. ಹ್ಯಾಟ್ಸ್ ಆಫ್ ಯು ಸರ್
ಲೇಖನ : ಎ ಎಸ್ ಪೂಜಾರಿ
ಕಾಡಿನಕಲ್ಲು
ಇಡೂರು ಕುಂಜ್ಞಾಡಿ













