ಮುಳ್ಳಿಕಟ್ಟೆ(ಫೆ,27 ): ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿನಮಕ್ಕಿ ಗೋಳಿಕಟ್ಟೆಯ ಸ್ವಾತಂತ್ರ್ಯ ಹೋರಾಟಗಾರ
ಮಂಕಿ ದಿ.ರಾಮಣ್ಣನವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಫೆ.27ರಂದು ನಡೆಯಿತು.
ಕಾರ್ಯಕ್ರಮದಲ್ಲಿ ನಾಮ ಫಲಕವನ್ನು ಮೊಗವೀರ ಮಹಾಜನ ಸೇವಾ ಸಂಘ (ರಿ), ಬಗ್ವಾಡಿ ಹೋಬಳಿ ,ಕುಂದಾಪುರ ಶಾಖೆಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಹಟ್ಟಿಯಂಗಡಿ ಯವರು ಅನಾವರಣಗೈದರು. ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಮಂಕಿ ರಾಮಣ್ಣರ ಸೇವೆಯ ಕುರಿತು ಶ್ರೀ ಡಾ.ಕಿಶೋರ್ ಕುಮಾರ್ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಚೇತನ್ ಬಟ್ಟೆಕುದ್ರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯರಾಗಿ ಶ್ರೀ ನರೇಂದ್ರ ಕುಮಾರ್ ಕೋಟ, ಶ್ರೀ ವಿಜಯ್ ನರಸಿಂಹ ಐತಾಳ್ ,ಶ್ರೀ ಎಮ್.ಎಮ್.ಸುವಣ೯,ಶ್ರೀ ಪ್ರಭಾಕರ ಸೇನಾಪುರ,ಶ್ರೀ ಲೋಹಿತಾಶ್ವ ಆರ್ ಕುಂದರ್ ,ಶ್ರೀ ಸುಧಾಕರ್ ಕಾಂಚನ್ ,ಮತ್ತು ಸ್ವಾತಂತ್ರ್ಯ ಹೋರಾಟಗಾರ ಪತ್ನಿ ಗಣಪು ಯಾನೆ ಶಾರದಮ್ಮ ವಹಿಸಿದ್ದರು.
ಸ್ವರಾಜ್ಯ75 ಸಂಘಟನೆ ಯವರ ನೇತ್ರತ್ವದಲ್ಲಿ , ಮೊಗವೀರ ಯುವ ಸಂಘಟನೆ (ರಿ) ಉಡುಪಿ ಹೆಮ್ಮಾಡಿ ಘಟಕ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್,, ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ,ಶ್ರೀ ಜಗದೀಶ್ ನೆಂಪು, ಶ್ರೀ ರಾಜು ಶ್ರೀಯಾನ್,ಶ್ರೀ ರಾಜು ಹಕ್ಲಾಡಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು ,ಸ್ಥಳೀಯರು ಉಪಸ್ಧಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಸತೀಶ್ ವಡ್ಡರ್ಸೆ,ಪ್ರಾಸ್ತಾವಿಕವನ್ನು ಸ್ವರಾಜ್ಯ ೭೫ ಕಾರ್ಯಕ್ರಮ ಸಂಚಾಲಕರಾಗಿರುವ ಶ್ರೀ ಪ್ರದೀಪ
ಕುಮಾರ್ ಬಸ್ರೂರು ಹಾಗೂ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಹೆಮ್ಮಾಡಿ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಧನ್ಯವಾದಗೈದರು.