ಮಂಗಳೂರು (ಮಾ.16): ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೈಂಟ್ ಅಲೋಸಿಯಸ್ ಈಜುಕೊಳದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಇಲ್ಲಿನ ಹಿಂದಿ ಶಿಕ್ಷಕಿ ಕೃಪಾ ರವರು 200 ಮೀ. ಫ್ರೀ ಸ್ಟೈಲ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ, 50 ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ರಾಷ್ಟ್ರೀಯ ಈಜುಪಟು ಬಿ.ಕೆ.ನಾಯ್ಕ್ ಅವರು ಈಜು ತರಬೇತಿ ನೀಡಿರುತ್ತಾರೆ. ಇವರು ಕುಂದಾಪುರದ ಖಾರ್ವಿಕೇರಿಯ ಗರ್ಲ್ಸ್ ಸ್ಕೂಲ್ ಮತ್ತು ಕುಂದಾಪುರ ಜ್ಯೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ.