ಉಡುಪಿ (ಮಾ.29): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಹಾಗೂ ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಜಂಟಿ ಆಶ್ರಯದಲ್ಲಿ ಕಳೆದ ಕರೋನಾ ಲಾಕ್ಡೌನ್ ಸಂಧರ್ಭದಲ್ಲಿ ನಾಡೋಜ. ಡಾ.ಜಿ.ಶಂಕರ್ ರವರ ಸಲಹೆಯ ಮೇರೆಗೆ ಕರೋನಾದಿಂದ ಮ್ರತಪಟ್ಟವರ ಶವಸಂಸ್ಕಾರ ಕಾರ್ಯದಲ್ಲಿ ತಮ್ಮ ಜೀವದ ಹಂಗು ತೋರೆದು ಅನೇಕ ಶವಗಳಿಗೆ ಮುಕ್ತಿ ನೀಡುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡ ಉಡುಪಿ ಹಾಗೂ ಕುಂದಾಪುರ ಭಾಗದ ಕರೋನಾ ಫ್ರಂಟ್ಲೈನ್ ವಾರಿಯರ್ಸ್ ಗಳ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಉಡುಪರವರು ಕರೋನಾ ಫ್ರಂಟ್ಲೈನ್ ವಾರಿಯರ್ಸ್ ತಂಡದ ಸಂಚಾಲಕ ಶಿವರಾಮ್ ಕೆ . ಎಮ್ ಹಾಗೂ ಸಂಘಟನೆಯ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಕೊರೋನಾ ವಾರಿಯರ್ಸ್ ಸೇವೆ ಸಲ್ಲಿಸಿದ ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳನ್ನು ಗುರುತಿಸಿ ಗೌರವಿಸುವ ಹಾಗೂ ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ನ ಕರೋನಾ ಸಂದರ್ಭದಲ್ಲಿನ ಮಾನವೀಯ ನೆಲೆಯ ಸೇವೆಯನ್ನು ಗುರುತಿಸುವ ಹಿನ್ನೆಲೆಯಲ್ಲಿ ಮಾ.29 ರಂದು ಉಡುಪಿಯ ಶಾಮಿಲಿ ಸಭಾ ಭವನದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಹಾಗೂ ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಹಮ್ಮಿಕೊoಡ ಕಾರ್ಯಕ್ರಮವನ್ನು ಸಭೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಲಾ ಯಿತು. ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ರವರು ಅಭಿನಂದನಾ ಪತ್ರವನ್ನು ಮೊಗವೀರ ಯುವ ಸಂಘಟನೆ(ರಿ.). ಉಡುಪಿ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ.ಎಮ್ ರವರಿಗೆ ನೀಡಿ ಗೌರವಿಸಿದರು. ಈಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.