ಕುಂದಾಪುರ(ಮಾ.28): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಮಾ.27 ರಂದು ಕುಂದಾಪುರದ ಕುಂಭಾಶಿ ರಾಧಾಬಾಯಿ ವೆಂಕಟ್ರಮಣ ಪ್ರಭು ರಂಗಮಂದಿರ (ಕೊಯಾಕುಟ್ಟಿ) ಸಭಾಂಗಣದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಪ್ರಕಾಶ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸುರೇಶ್ ವಿಠ್ಠಲವಾಡಿ ಪ್ರಾಸ್ತಾವಿಸಿದರು. ಜಿಲ್ಲಾ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಶಿವರಾಮ್.ಕೆ.ಎಮ್ ,ಮಾಜಿ ಅಧ್ಯಕ್ಷರಾದ ಸಂಜೀವ ಕೋಟ,ಸತೀಶ್ ಎಮ್.ನಾಯ್ಕ್ ,ಸದಾನಂದ ಬಳ್ಕೂರು, ಮೊಗವೀರ ಮಹಾಜನ ಸೇವಾ ಸಂಘ ಸೇವಾ (ರಿ) ಬಗ್ವಾಡಿ ಹೋಬಳಿ ಕುಂದಾಪುರ ಮಾಜಿಶಾಖಾಧ್ಯಕ್ಷ ಕೆ. ಕೆ . ಕಾಂಚನ ,ಅಧ್ಯಕ್ಷ ನೂತನ ಉದಯ್ ಕುಮಾರ್ ಹಟ್ಟಿಯಂಗಡಿ,ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ರವೀಶ್ ಕೊರವಡಿ,ಕುಂದಾಪುರ ಪುರಸಭಾ ಅಧ್ಯಕ್ಷೆ ಶ್ರೀಮತಿ ವೀಣಾ ಭಾಸ್ಕರ ಮೆoಡೆನ್ ಉಪಸ್ಥಿತರಿದ್ದರು.

ನಿರ್ಗಮಿತ ಅಧ್ಯಕ್ಷ ಶ್ರೀ ಗಣೇಶ್ ಮೆಂಡನ್ ನೂತನ ಅಧ್ಯಕ್ಷ ಚಂದ್ರಹಾಸ ಕೋಣಿಯವರಿಗೆ ಸಂಘಟನೆಯ ಲಾಂಛನ ಹಸ್ತಾಂತರಿಸಿ ಶುಭ ಹಾರೈಸಿ ,ಅಧ್ಯಕ್ಷೀಯ ನೆಲೆಯ ಮಾತುಗಳನ್ನಾಡಿದರು. ನೂತನ ಅಧ್ಯಕ್ಷ ಚಂದ್ರಹಾಸ ಕೋಣಿ , ಕಾರ್ಯದರ್ಶಿ,ಸಂತೋಷ್ ಮದ್ದುಗುಡ್ಡೆ,ಕೋಶಾಧಿಕಾರಿ ಮಾಧವ ಹಾಗೂ ನೂತನ ಪದಾಧಿಕಾರಿಗಳಿಗೆ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ ಪ್ರತಿಜ್ಞಾವಿಧಿ ಭೋಧಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಸೇವಾ (ರಿ) ಬಗ್ವಾಡಿ ಹೋಬಳಿ ಕುಂದಾಪುರ ಇದರ ಕೋಶಾಧಿಕಾರಿ ಸುಧಾಕರ್ ಕಾಂಚನ ಕಾರ್ಯಕ್ರಮ ನಿರೂಪಿಸಿದರು.

ಘಟಕದ ಮಾಜಿ ಅಧ್ಯಕ್ಷ ರಮೇಶ್ ಟಿ. ಟಿ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.









