ಮರವಂತೆ(ಏ ,03):ಸರ್ಕಾರಿ ಶಾಲಾ ಉಳಿಸುವ ಅಭಿಯಾನದಲ್ಲಿ ತನ್ನ ಪಾತ್ರವಹಿಸುತ್ತಿರುವ ಡಾ.ಗೋವಿಂದ ಬಾಬು ಪೂಜಾರಿಯವರು ಈಗಾಗಲೇ ಅನೇಕ ಸರ್ಕಾರಿ ಶಾಲೆಗಳಿಗೆ ಒಂದೊಂದೇ ಕೊಡುಗೆ ನೀಡುತ್ತಾ ಬಂದಿದ್ದಾರೆ . ಹಾಗೆಯೇ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಕೊಡುಗೆಯಾಗಿ ರೂ.80,000 ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಏ.03 ರಂದು ಶಾಲೆಗೆ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಿರಿಯ ಚಿಂತಕರು ಶ್ರೀ ಎಸ್. ಜನಾರ್ದನ ಮರವಂತೆ ಯವರು ಉದ್ಘಾಟಿಸಿ ಶುಭ ಹಾರೈಸಿದರು .
ಈ ಸಂದರ್ಭ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಅವರು ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಮರವಂತೆ ಸರ್ಕಾರಿ ಶಾಲೆಯಲ್ಲಿನ ಪುಟ್ಟ ಮಕ್ಕಳ ಆರೋಗ್ಯ ದ್ರಷ್ಟಿಯಿಂದ ಶುಧ್ಧ ನೀರಿನ ಘಟಕವನ್ನು ನೀಡಿರುದಾಗಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.