ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಗಾದೆ ಮಾತು ಅಕ್ಷರಸಹ ನಿಜ. ಭಾರತೀಯರಿಗೆ ಕಾಶ್ಮೀರ ಕಣಿವೆ ದೂರದಿಂದ ನೋಡಿದಾಗ ಅದೆಷ್ಟು ಸುಂದರ ಅನ್ನಿಸುತ್ತೆ…. ಕವಿ ಮನಗಳಿಗೆ ವರ್ಣಿಸಲು ಅಲ್ಲಿ ಸಾಕಷ್ಟು ಪದಗಳ ಸಾಲುಗಳೇ ಅಡಗಿದೆ. ಇಷ್ಟೊಂದು ಸುಂದರ ತಾಣದ ಇತಿಹಾಸ ಹುಡುಕುತ್ತ ಹೊರಟರೆ ಕಾಶ್ಮೀರ ಕಣಿವೆ ಕರಾಳ ಅದ್ಯಾಯ ಬಗೆದಷ್ಟು ರೋಚಕತೆ ಹೆಚ್ಚಾಗುತ್ತದೆ.
ಬನ್ನಿ ಅದರ 30 ವರ್ಷದ ಹಿಂದಿನ ಸತ್ಯ ಘಟನೆ ಕುರಿತು ತಿಳಿದುಕೊಳ್ಳೋಣ. ಯಾವುದೇ ಅಬ್ಬರವಿಲ್ಲದೇ ಮಾರ್ಚ್ 11 ಕ್ಕೆ ಬಿಡುಗಡೆಗೊಂಡ “ವಿವೇಕ್ ಅಗ್ನಿ ಹೊತ್ರಿ” ನಿರ್ದೇಶನದ ಚಿತ್ರ ಇಂದು ಜನ ಮನದಲ್ಲಿ ಮಾತ್ರವಲ್ಲದೆ ರಾಜಕೀಯ ಅಂಗಳದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ….
ರೇಡಿಯೋ ಕಾಮೆಂಟ್ರಿ ಕೇಳಿಸಿಕೊಂಡು ಕ್ರಿಕೆಟ್ ಆಡುವ ಹಿಂದೂ ಮುಸ್ಲಿಂ ಹುಡುಗರ ನಡುವೆ ” ಸಚಿನ್ ಸಚಿನ್ “ಎಂದು ಕುಣಿದಾಗ ಹತ್ತಿರವಿದ್ದ ಮುಸ್ಲಿಂ ಯುವಕರು ಹಿಂದೂ ಹುಡುಗನ ಮೇಲೆ ಮುಗಿಬೀಳುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಬರುವ ಹುಡುಗರು ಮನೆ ಸೇರಲು ಪಡುವ ಪಾಡು ಇಡೀ ಚಿತ್ರಮಂದಿರವನ್ನು ಆರಂಭದಲ್ಲೇ ಸ್ಮಶಾನ ಮೌನವನ್ನಾಗಿಸುತ್ತೆ.

ಬೀದಿ ಬೀದೀಲಿ ರಕ್ಕಸ ಮನದ ಜನ ಹುಚ್ಚೇದ್ದು ಕೂಗಿ ದೌರ್ಜನ್ಯ ಮೆರೆವ ರೋಚಕ ಕಹಾನಿ “ಕಾಶ್ಮೀರ್ ಫೈಲ್ ” 1990 ರಲ್ಲಿ ಹಿಂದೂ ಪಂಡಿತರು ಅನುಭಸಿದ ನರಕಯಾತನೆಯ ಒಂದಷ್ಟು ಸತ್ಯ ಘಟನೆ ಇಲ್ಲಿದೆ. ” ಮತಾಂತರಗೊಳ್ಳಿ, ಓಡಿ ಹೋಗಿ,ಇಲ್ಲಾ ಸಾಯಿರಿ ” ಅನ್ನೋ ಸ್ಲೋಗನ್ ಮುಂದಿಟ್ಟು ಹಿಂದೂಗಳ ಹತ್ಯೆ ನಡೆಯುತ್ತದೆ. ಹಿಂದೂ ಮಹಿಳೆಯರನ್ನು ಸೆರೆ ಸಿಕ್ಕವರಂತೆ ಹಿಂಸಿಸಲಾಗುತ್ತದೆ. ಆದರೆ ಅಂದಿನ ರಾಜಕಾರಣಿಗಳು ಕಣ್ಣೆದುರೇ ದಿನವೂ ನಡೆವ ನರಮೇಧಕ್ಕೆ ತುಟಿಬಿಚ್ಚಲ್ಲ. ಸತ್ಯ ಬಯಲಿಗೆಳೆಯ ಬೇಕಿದ್ದ ಅಂದಿನ ಮಾಧ್ಯಮ, ಅಧಿಕಾರಿಗಳು, ಬುದ್ದಿ ಜೀವಿಗಳು ಜೀವ ಭಯಕ್ಕಾಗಿ ಸತ್ಯ ಮರೆಮಾಚಿದರಾ..?? ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ..

ಕಾಶ್ಮೀರ್ ಫೈಲ್ ನ ಒಂದೊಂದು ಪುಟ ಕೂಡ ರಕ್ತಸಿಕ್ತವಾಗಿದ್ದು ನಿರ್ದೇಶಕರ ಜಾಣ್ಮೆ ಮೆಚ್ಚಲೇ ಬೇಕು. ಇಲ್ಲಿ ಯಾವುದೇ ಪಾತ್ರಕ್ಕೂ ವೈಭವ ನೀಡದೆ ಒಂದಷ್ಟು ಕಾಶ್ಮೀರಿ ಸುಂದರ ದ್ರಶ್ಯದೊಂದಿಗೆ ನೈಜತೆಗೆ ಹೆಚ್ಚು ಗಮನ ನೀಡಿ ನೋಡುಗರ ಮನ ಗೆದ್ದಿದ್ದಾರೆ. ಸತ್ಯಾಸತ್ಯತೆ ಜನರ ಮುಂದಿಟ್ಟಿದ್ದರಿಂದಲೇ 25 ಕೋಟಿ ಬಜೆಟ್ ಚಿತ್ರ ಇಂದು 200 ಕೋಟಿ ಬಾಚಿ ದೇಶದಾದ್ಯಂತ ಸದ್ದು ಮಾಡಿದೆ. ಅದರಲ್ಲೂ ಪ್ರಧಾನಿ ಮೋದಿ ಚಿತ್ರ ನೋಡಿ ಎಲ್ಲರೂ ನೋಡುವಂತೆ ಮನವಿ ಮಾಡಿದ್ದಾರೆ.
ಸ್ವಾಮಿ, ಸಂತರು ಮೊದಲ ಬಾರಿಗೆ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ.ಆದರೆ ಕೆಲವು ಅರಗಿಸಿಕೊಳ್ಳಲಾಗದ ಮನಸುಗಳು ಅಪಪ್ರಚಾರ ಮಾಡಲು ಹೊರಟಿರೂದು ದುರಾದೃಷ್ಟ..ಈ ಹಿಂದೆ ಕೂಡ ಇಂತಹ ಹತ್ತಾರು ಸಿನಿಮಾಗಳು ತಣ್ಣಗೆ ಬಂದು ಬಿರುಗಾಳಿ ಎಬ್ಬಿಸಿವೆ. ಕಾಣದ ಕೈಗಳು ಚಿವುಟಿ ಹಾಕಲು ಯತ್ನಿಸಿವೆ. ದೇಶದಲ್ಲಿ ಇಂತಹ ನೂರಾರು ಘಟನೆ ನಡೆದಿದ್ದು, ನಡೆಯುತ್ತಿದ್ದು ರಾಜಕೀಯ ಕಾರಣದಿಂದಲೇ ಇಂದಿಗೂ ಜನರ ಬಳಿ ತಲುಪಿಲ್ಲ.

ಅಬ್ಬರ ವೈಭವ ಇಲ್ಲದೆ ಇಡೀ ಚಿತ್ರ ಮಂದಿರದ ಜನರ ಮನ ಗೆದ್ದ ನಿರ್ದೇಶಕರಿಗೆ ಒಂದು ಸಲಾಮ್ ಹೇಳಲೇ ಬೇಕು. ಪ್ರತಿಯೊಬ್ಬರೂ ನೋಡಲೇ ಬೇಕಾದ ಒಂದು ಸಿನಿಮಾಕ್ಕೆ ವೀಕ್ಷಕರೇ ಪ್ರಚಾರಕರಾಗಿದ್ದು ವಿಶೇಷ. ನಾವಿಕನಿಲ್ಲದ ದೋಣಿಯಂತೆ ಕಾಶ್ಮೀರ್ ಫೈಲ್ ಸಾಗುತ್ತಿದ್ದು ಇತಿಹಾಸದ ಪುಟ ಸೇರುತ್ತಿದೆ….
ದೂಳು ತುಂಬಿದ ಸಾವಿರಾರು ಫೈಲ್ ಗಳು ಇನ್ನಷ್ಟು ಹೊರಬರಲು ಇಂತಹ ಚಿತ್ರಗಳು ಮಾದರಿಯಾಗಲಿ. ಮತ್ತಷ್ಟು ಸತ್ಯ ಹೊರಬರಲಿ ಅನ್ನೋದು ನಮ್ಮ ಆಶಯ ಕೂಡ….
ಪ್ರಭಾಕರ್ ಶೆಟ್ಟಿ ಬೆಂಗಳೂರು

ಪ್ರಭಾಕರ್ ಶೆಟ್ಟಿ ಬೆಂಗಳೂರು












