ಕುಂದಾಪುರ(ಏ.7): ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಕಿರಣ್ ಪೂಜಾರಿ,ಕಾರ್ಯದರ್ಶಿಯಾಗಿ ಸಂತೋಷ ಪಟೇಲ್, ಗೌರವಾಧ್ಯಕ್ಷರಾಗಿ ಎಸ್ ಸತೀಶ್ ಕುಮಾರ್ ಕೋಟೇಶ್ವರ ರವರನ್ನು ಆಯ್ಕೆ ಮಾಡಲಾಯಿತು.
ಕಾನೂನು ಸಲಹೆಗಾರರಾಗಿ ಶ್ರೀ ರವಿಕಿರಣ್ ಮುರ್ಡೇಶ್ವರ ಮತ್ತು ಶ್ರೀ ಸೋಮನಾಥ ಹೆಗ್ಡೆ ಮತ್ತು ಸಂಘದ ಗೌರವ ಸಲಹೆಗಾರರಾಗಿ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕರಾದ ಟಿ. ಪಿ. ಮಂಜುನಾಥ್, ಉಪಾಧ್ಯಕ್ಷರಾಗಿ ಪ್ರದೀಪ್ ಪಟೇಲ್, ದಯಾನಂದ್ ನಾಯಕ್ ಮತ್ತು ಎಸ್ ಕೃಷ್ಣ ಮರಕಾಲ ಬೀಜಾಡಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ದಾಮೋದರ್ ಮೊಗವೀರ, ಪುರುಷೋತ್ತಮ್ ಪೂಜಾರಿ, ಜನಾರ್ಧನ್ ಕೆ. ಎಮ್ ಉಪಸ್ಥಿತರಿದ್ದರು.
ವರದಿ : ಈಶ್ವರ ನಾವುoದ