“ ಶಿಕ್ಷಣ ಭಾರತದ ಗ್ರಾಮೀಣ ಪ್ರದೇಶಗಳನ್ನು ತಲುಪಬೇಕು. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗುರಿಯನ್ನು ಸಾಧಿಸುವಂತಾಗಬೇಕು ” ಎಂಬ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರ ನುಡಿಯಂತೆ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾದದ್ದು.
ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ಹೆಜ್ಜೆ ಹಾಕಲು ಇಂದಿನ ಯುವ ಪೀಳಿಗೆಗೆ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಲು ಕುಂದಾಪುರ ತಾಲೂಕಿನ ಹೆಮ್ಮಾಡಿಯ ಹೃದಯ ಭಾಗದಲ್ಲಿರುವ ಪ್ರಕೃತಿ ರಮಣೀಯ ಪರಿಸರದಲ್ಲಿ ಮೈ ತಳೆದು ನಿಂತಿರುವ ಅತ್ಯಾಕರ್ಷಣೀಯವಾದ ಭವ್ಯವಾದ ಕಟ್ಟಡದೊಂದಿಗೆ ದಕ್ಷ ಆಡಳಿತ ಮಂಡಳಿ,ಅನುಭವಿಶಾಲಿ ಪ್ರಾಂಶುಪಾಲರು, ಹಾಗೂ ಉಪನ್ಯಾಸಕ ವೃಂದದವರಿಂದ ಸಮ್ಮಿಳಿತಗೊಂಡ ಸಂಸ್ಥೆಯೇ ಜನತಾ ಸ್ವತಂತ್ರ್ಯ ಪದವಿಪೂರ್ವ ಕಾಲೇಜು.
ಶ್ರೀ,ವಿ.ವಿ.ವಿ.ಆಡಳಿತ ಮಂಡಳಿಯವರಿಂದ 2007-08ರಲ್ಲಿ ಪ್ರಾರಂಭಗೊಂಡ ಜನತಾ ಸ್ವತಂತ್ರ್ಯ ಪದವಿಪೂರ್ವ ಕಾಲೇಜು ಹಲವು ವರ್ಷಗಳ ಕಾಲ ಮುನ್ನಡೆಸಿದರು. ಪ್ರಸಕ್ತ 2022-23ನೇ ಶೈಕ್ಷಣಿಕ ವರ್ಷದಿಂದ ಸಮರ್ಪಣಾ ಎಜುಕೇಶನ್ ಟ್ರಸ್ಟ್ (ರಿ) ನೂತನ ಆಡಳಿತ ಮಂಡಳಿಯವರು ಕಾಲೇಜನ್ನು ಮುನ್ನಡೆಸುತ್ತಿದ್ದಾರೆ.
ಕಾಲೇಜು ಆಡಳಿತ ಮಂಡಳಿ
ಸಮರ್ಪಣಾ ಎಜುಕೇಶನಲ್ ಟ್ರಸ್ಟ್ (ರಿ) ಶೀರ್ಷಿಕೆಯಡಿಯಲ್ಲಿ ಆರಂಭವಾದ ಕಾಲೇಜು ಅನುಭವಿಶಾಲಿ ಹಾಗೂ ಬೋಧನೆಯಲ್ಲಿ ಪ್ರಸಿದ್ಧಿ ಪಡೆದಿರುವ ನಾಲ್ವರು ಉಪನ್ಯಾಸಕ ವೃಂದದವರು ಒಂದಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಸದಾಶಯದೊಂದಿಗೆ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ (ರಿ) ಎನ್ನುವ ಆಡಳಿತ ಮಂಡಳಿಯನ್ನು ರಚಿಸಿಕೊಂಡಿರುತ್ತಾರೆ.
ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕರಾಗಿ ಮಾರ್ಗದರ್ಶನ ನೀಡಿರುವ ಹಿರಿಯ ಗೌರವಾನ್ವಿತ ಶ್ರೀಮತಿ ಚಿತ್ರಾ ಕಾರಂತ್ ರವರ ಸಾರಥ್ಯದಲ್ಲಿ, ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರು ಶ್ರೀ ಗಣೇಶ ಮೊಗವೀರ, ಉಪಾಧ್ಯಕ್ಷರು ಡಾ/ ಮಂಜುನಾಥ ಗಾಣಿಗ ,ಕಾರ್ಯದರ್ಶಿ ಶ್ರೀ ಸುನಿಲ್ ಚಿತ್ತಾಲ್ ,ಕೋಶಾಧಿಕಾರಿ ಶ್ರೀ ಕಾರ್ತಿಕೇಯ ಎಮ್.ಎಸ್. ಆಡಳಿತ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಶ್ರೀ ಪ್ರದೀಪ್ ಶೆಟ್ಟಿ ಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಕ್ಷಣಕ್ಕಾಗಿ ನಿರಂತರ ಬದ್ಧತೆಯನ್ನು ಕಾಯ್ದುಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಆರಂಭವಾದ ನಮ್ಮ ಕಾಲೇಜು ಪದವಿಪೂರ್ವ ಹಂತದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ.ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಶಿಕ್ಷಣ ನೀಡಲು ಸಜ್ಜಾಗಿದೆ. ವಿಜ್ಞಾನ ವಿಭಾಗದಲ್ಲಿ PCMB,PCMC,PCMS ಹಾಗೂ ವಾಣಿಜ್ಯ ವಿಭಾಗದಲ್ಲಿ CEBA,SEBA ಹಾಗೂ BEBA ಪಠ್ಯಕ್ರಮ ವಿಭಾಗಗಳನ್ನು ಹೊಂದಿದೆ. ಶಿಸ್ತು,ಅಚ್ಚುಕಟ್ಟುತನ,ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಮಕ್ಕಳ ಆಂತರ್ಯದಲ್ಲಿ ಬಿತ್ತುವ ಮೂಲಕ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಶಿಕ್ಷಣ ನೀಡಲು ಸಜ್ಜಾಗಿದೆ.
ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಉದ್ದೇಶವನ್ನಿಟ್ಟು ಕೊಂಡು ಅನೇಕ ಸೃಜನಶೀಲ ಚಟುವಟಿಕೆಗಳನ್ನು ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳ ಚಿತ್ತ ಭಿತ್ತಿಯಲ್ಲಿ ಚಿಗುರೊಡೆಯುವ ಆಲೋಚನೆಗಳಿಗೆ ಪುಷ್ಟಿ ನೀಡಿ ಬಲಪಡಿಸುವ ಉದ್ದೇಶದಿಂದ, ಕೇವಲ ಓದಿಗಷ್ಟೆ ಸೀಮಿತವಾಗಿರದೆ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಇಂದಿನ ಯುವ ಪೀಳಿಗೆಗೆ ವಿಶೇಷ ತರಬೇತಿಗಳ ಅಗತ್ಯವಿರುವುದನ್ನು ಮನಗೊಂಡು ಭವಿಷ್ಯದಲ್ಲಿ ವಿವಿಧ ಉದ್ಯೋಗಗಳನ್ನು ಪಡೆಯಲು ಬೇಕಾಗಿರುವ ಸಂದರ್ಶನಗಳನ್ನು ಎದುರಿಸುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ವಿವಿಧ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ವಯುಕ್ತಿಕ ಬೆಳವಣಿಗೆಗಾಗಿ ವ್ಯಕ್ತಿತ್ವ ವಿಕಸನದಂತಹ ತರಬೇತಿ ಹಾಗೂ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ವಿದ್ಯಾರ್ಥಿ ಕೌನ್ಸಲಿಂಗ್ ನಡೆಸಲಾಗುತ್ತದೆ. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವರ್ಷದುದ್ದಕ್ಕೂ ಆಯೋಜನೆ ಮಾಡುವುದರ ಮೂಲಕ ಕ್ರೀಡೆ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ.
2022-2023ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ (ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ದಾಖಲಾತಿ ಆರಂಭಗೊಂಡಿದೆ.
ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳು: 8951371853,9731488501
6360574596,9739789488,9743289565.
—————————————————-
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದೊರಕುವ ವಿಶೇಷ ಸೌಲಭ್ಯಗಳು.
>ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವಿರುವ ಉತ್ತಮ ಉಪನ್ಯಾಸಕ ವೃಂದ.
>ಸ್ಪರ್ಧಾತ್ಮಕ ಪರೀಕ್ಷೆ ಗಳಾದ CET/ NEET/JEE-M/IIT/KVPY/NATA/NDA/CA,CS ತರಗತಿಗಳು CMA ಹಾಗೂ Banking Foundation Courseಗಳಿಗೆ ಅನುಭವಶಾಲಿ ಉಪನ್ಯಾಸಕರಿಂದ ಉತ್ತಮ ರೀತಿಯ ತರಬೇತಿ.
>ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಸಂಶೋಧನಾ ಕ್ಷೇತ್ರಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ Indian Institute of Science ಹಮ್ಮಿಕೊಂಡಿರುವ KVPY(Kishor Vaigyanic Protsahan Yojana) Fellowship Award 2022-23ರ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಉತ್ತಮ ಫಲಿತಾಂಶವನ್ನು ಪಡೆಯುವ ಯೋಜನೆ.
>ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಯ ಜೊತೆಗೆ ಪ್ರಾಯೋಗಿಕ ಜ್ಞಾನಕ್ಕಾಗಿ Business Day, industrial Visit ಮುಂತಾದ ಕಾರ್ಯಕ್ರಮಗಳನ್ನು ಆಯೋಜನೆ.
>ಕ್ರೀಡಾ ಹಾಗೂ ಸಾಂಸ್ಕ್ರತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ತೇಜನಕ್ಕಾಗಿ ನಮ್ಮ ಕಾಲೇಜಿನಲ್ಲಿ ಉಚಿತ ಪ್ರವೇಶ.
>ಕಲಿಕೆಯಲ್ಲಿ ಹಿಂದುಳಿದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಸಂಜೆ (5-6)ಗಂಟೆಯವರೆಗೆ ಉಚಿತ ವಿಶೇಷ ತರಗತಿಗಳು.
>ಮಧ್ಯಾಹ್ನದ ಭೋಜನದ ವ್ಯವಸ್ಥೆ.
>ದೂರದ ಊರುಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗಾಗಿ ಸುರಕ್ಷಿತ ಬಸ್ ವ್ಯವಸ್ಥೆ. ( ಶಿರೂರು,ಬೈಂದೂರು, ಕೊಲ್ಲೂರು,ಕಮಲಶಿಲೆ,ಆಜ್ರಿ,ನೇರಳಕಟ್ಟೆ,ಮಾವಿನಕಟ್ಟೆ,ಕರ್ಕಿ,ಹಟ್ಟಿಯಂಗಡಿ,ಹೊಸಂಗಡಿ,ಸಿದ್ಧಾಪುರ, ಅಂಪಾರು,ಬಸ್ರೂರು,ಬ್ರಹ್ಮಾವರ,ಹಾಗೂ ಕುಂದಾಪುರ ಶಾಸ್ತ್ರೀ ವ್ರತ್ತದಿಂದ- ಕಾಲೇಜಿನ ಕ್ಯಾಂಪಸ್) ಈ ಮಾರ್ಗಗಳ ಮೂಲಕ ಕಾಲೇಜಿನ ಕ್ಯಾಂಪಸ್ ವರೆಗೆ ಬಸ್ ವ್ಯವಸ್ಥೆ.
>ಕಾಲೇಜು ವಿಭಾಗದ ವಿವಿಧ ಕ್ರೀಡೆಗಳಿಗೆ ಉತ್ತಮ ರೀತಿಯ ತರಬೇತಿ ನೀಡಿ ಸ್ಪರ್ಧಾತ್ಮಕವಾಗಿ ವಿದ್ಯಾರ್ಥಿಗಳನ್ನು ತಯಾರಿ ಮಾಡಲು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪ್ರದೀಪ್ ಶೆಟ್ಟಿ ಹಾಗೂ ತಂಡದವರಿಂದದ ಸೂಕ್ತ ತರಬೇತಿ ನೀಡಿ ಕ್ರೀಡಾ ರಂಗದಲ್ಲಿಯು ವಿಶೇಷವಾಗಿ ಗುರುತಿಸುವ ಕಾರ್ಯ.
>ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಉತ್ತೇಜನ ನೀಡಲು ಆಸಕ್ತ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ಧ ಜಾದುಗಾರರಾದ ಸತೀಶ್ ಹೆಮ್ಮಾಡಿ ಇವರಿಂದ ಜಾದೂ ತರಬೇತಿ. ಪ್ರಸಿದ್ಧ ಭರತನಾಟ್ಯ ಕಲಾವಿದರಾದ ವಿದ್ವಾನ್ ಭವಾನಿ ಶಂಕರ್ ಇವರಿಂದ ಭರತನಾಟ್ಯ ತರಬೇತಿ .
>ಸುಪ್ರಸಿದ್ಧ ಯಕ್ಷಗಾನ ಕಲಾವಿದೆಯಾಗಿರುವ ಅಶ್ವಿನಿ ಕೊಂಡದಕುಳಿ ಇವರಿಂದ ಯಕ್ಷಗಾನ ತರಬೇತಿ.
>ಸುಸಜ್ಜಿತವಾದ ಗ್ರಂಥಾಲಯ ವ್ಯವಸ್ಥೆ.
>ವಿದ್ಯಾರ್ಥಿಗಳ ದೈಹಿಕ ಕ್ರೀಡೆಗಳಿಗೆ ವಿಶೇಷ ಅವಕಾಶಗಳನ್ನು ಒದಗಿಸಲು ವಿಶಾಲವಾದ ಆಟದ ಮೈದಾನ.
>ವಿಜ್ಞಾನ ಕಲಿಕೆಗೆ ಪೂರಕವಾದ ಸುಸಜ್ಜಿತವಾದ ಹಾಗೂ ಆಕರ್ಷಕವಾದ ಪ್ರಯೋಗಾಲಯಗಳು.
>ವಿಶಾಲವಾದ ಹಾಗೂ ಅತ್ಯಾಧುನಿಕವಾದ ಗಣಕಯಂತ್ರ ಕೊಠಡಿ (Computer lab).
>ಹುಡುಗರು ಹಾಗೂ ಹುಡುಗಿಯರಿಗಾಗಿ ಪ್ರತ್ಯೇಕವಾದ ಸುಸಜ್ಜಿತವಾದ ಹಾಸ್ಟೆಲ್ ವ್ಯವಸ್ಥೆ…
>ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಮರ್ಪಣಾ ಎಜುಕೇಶನ್ ಟ್ರಸ್ಟ್ ನ ಮೂಲಕ ವಿದ್ಯಾರ್ಥಿ ಪ್ರೋತ್ಸಾಹ ಧನ..
>ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (ಸರ್ಕಾರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ) ವಿದ್ಯಾರ್ಥಿ ವೇತನ.
>ಕಾಲೇಜು ಆವರಣದಲ್ಲಿಯೇ ಸುಸಜ್ಜಿತವಾದ ಕ್ಯಾಂಟಿನ್ ವ್ಯವಸ್ಥೆ.
>ಇನ್ನಿತರ ಪ್ರಮುಖವಾದ ಸೌಲಭ್ಯಗಳೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕ ವಾತಾವರಣ .
ವಿದ್ಯಾರ್ಥಿಗಳ ಜ್ಞಾನಕೌಶಲ್ಯವನ್ನು ಗಟ್ಟಿಗೊಳಿಸಲು ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡುವ ಹೊಂಗನಸು ನನಸಾಗಲೆಂಬುದು ಸಂಸ್ಥೆಯ ಆಡಳಿತ ಮಂಡಳಿಯವರ ಕನಸಿನೊಂದಿಗೆ, ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀಮತಿ ಚಿತ್ರಾ ಕಾರಂತರವರ ಸೂಕ್ತ ಮಾರ್ಗದರ್ಶನದಲ್ಲಿ,ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರ ಉತ್ತಮ ನಾಯಕತ್ವ ಗುಣ, ಕಾಲೇಜು ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಕಾಲೇಜು ಉತ್ತಮ ಮಟ್ಟದಲ್ಲಿ ಮುನ್ನಡೆಯಲು ಯೋಜನೆಯನ್ನು ರೂಪಿಸಿದೆ.