ಗಂಗೊಳ್ಳಿ (ಏ .11): ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ ಗಂಗೊಳ್ಳಿ ಇದರ 35 ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿಯ 29 ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯ ಕಾರ್ಯಕ್ರಮವು ಮೇಲ್ ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಏ.20 ರ ಬುಧವಾರದಂದು ಜರಗಲಿರುವುದು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದು ,ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರಿನ ಶಾಸಕ ಸುಕುಮಾರ ಶೆಟ್ಟಿ, ಎಸ್ ರಾಜು ಪೂಜಾರಿ, ವಿನೋದ್ ಕುಮಾರ್ ಗುಜ್ಜಾಡಿ, ಡಾI ರಂಜಿತ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಅದೇ ದಿನ ಧನ್ವಿ ಪೂಜಾರಿ ಮರವಂತೆ,ರಮೇಶ್ ಮಹಾಲೆ, ಶಿವಾನಂದ ತಲ್ಲೂರು, ಡಾ.ಗಣೇಶ್ ಗಂಗೊಳ್ಳಿ, ಪ್ರದೀಪ್ ಮತ್ತು ಅನುರಾಗ ಜಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತ್ರಿವಳಿ ಸಂಸ್ಥೆಗಳ ಸಂಯುಕ್ತ ಪ್ರಕಟಣೆ ತಿಳಿಸಿದೆ.











