ಯಪ್ಪಾ..ಬರೋಬ್ಬರಿ 16.50 ಎಕ್ರೆ ಜಾಗ…ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಕೋಟಿ – ಕೋಟಿ ಬೆಲೆ ಬಾಳುವ ಆಸ್ತಿ ಎಂದು ಹುಬ್ಬೆರಿಸಿ ಆಶ್ಚರ್ಯ ಚಿಕಿತರಾಗಿ ಅಕ್ಕ ಪಕ್ಕದವರ ಜೊತೆ ಮಾತನಾಡುವ ಜನರನ್ನು ಕಂಡು ಹೀಗೆ ಸುಮ್ಮನೆ ಆಲೋಚಿಸತೋಡಗಿದೆ.
ಆಧುನಿಕ ಬದುಕಿನ ಈ ನಾಗಾಲೋಟದಲ್ಲಿ ತಾನು,ತನ್ನದು,ತನ್ನದಷ್ಟಕ್ಕೆ ಎನ್ನುವ ಸ್ವಾರ್ಥಪರತೆಗೆ ಒಳಗಾದ ಜನತೆ ಇಂದು ಪರರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತೀರುವುದು ವಾಸ್ತವ.
ಈ ಸ್ವಾರ್ಥ ತುಂಬಿದ ಜಗತ್ತೀನಲ್ಲಿ ಒಂದಿಂಚು ಭೂಮಿಗೂ ಹೊಡೆದಾಡುವ ಮನುಷ್ಯರ ನಡುವೆ ಉದ್ಯಾವರ ದಿ. ಸದಿಯ ಸಾಹುಕಾರ್ ರವರ ಉದಾರವಾದಿ ವ್ಯಕ್ತಿತ್ವ ತುಂಬಾ ವಿಭಿನ್ನವಾಗಿ ಕಂಡುಬಂದಿತು. ಹುಟ್ಟು ಸಾವಿನ ನಡುವಿನ ಜೀವನದಲ್ಲಿ ನಾವು ಪರರಿಗೆ ನಿಸ್ವಾರ್ಥತೆಯಿಂದ ಕೊಡುವುದೇ ಶ್ರೇಷ್ಠ ಎನ್ನುವ ಭಾವ ಅವರ ಮೂರ್ತಿಯಲ್ಲಿ ಪ್ರತಿಬಿಂಬಿಸುತಿತ್ತು.
ಆರಾಧ್ಯ ದೇವತೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 50 ರ ದಶಕದಲ್ಲೇ ದೇಣಿಗೆ ರೂಪದಲ್ಲಿ ಇವರು 16.50 ಎಕ್ರೆ ಭೂಮಿ ನೀಡಿರುವುದು ಅವರ ಹ್ರದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಂತಿದೆ. ಇಂದು ದೇಗುಲದ ಸಮಗ್ರ ಜೀರ್ಣೋದ್ದಾರದ ಐತಿಹಾಸಿಕ ಸಂದರ್ಭದಲ್ಲಿ ಇವರ ಕುರಿತು ತಿಳಿದುಕೊಳ್ಳಲು ಅವಕಾಶ ಸಿಕ್ಕಿತು. ದಿ. ಸದಿಯ ಸಾಹುಕಾರ್ ರವರು ಕೇವಲ ಸ್ಥಳದಾನ ಮಾತ್ರ ಮಾಡಿದಲ್ಲದೇ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದವರು. ಸಮುದಾಯದ ಜನರ ನಡುವಿನ ವ್ಯಾಜ್ಯಗಳಿಗೆ ನ್ಯಾಯವಾದಿಯಂತಿದ್ದವರು. ಊರ- ಪರವೂರ ಜನಪರ ಕಾರ್ಯಕ್ರಮಕ್ಕೆ ಉದಾತ್ತ ದೇಣಿಗೆ ಇತ್ತವರು. ಅದೆಷ್ಟೋ ಬಡ ಕಾರ್ಮಿಕರಿಗೆ ಉದ್ಯೋಗ ಕೊಟ್ಟವರು.
ಒರ್ವ ವ್ಯಕ್ತಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯ ಬೇಕಾದರೆ ಈ ತೆರೆನಾದ ಉದಾತ್ತ ಚಿಂತನೆ ಬೆಳೆಸಿಕೊಳ್ಳ ಬೇಕು. ನಮ್ಮ ಕೈಲಾದಷ್ಟು ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡಬೇಕು. ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ನಿಷ್ಕಲ್ಮಶ ಮನಸ್ಸು ಹೊಂದುವವರಾಗ ಬೇಕು ಅನ್ನುವಂತೆ ಭಾಸವಾಗುತ್ತಿದೆ ದಿ. ಸದಿಯ ಸಾಹುಕಾರರ ಬದುಕಿನ ಬಿಂಬ.
ದಿ. ಸದಿಯ ಸಾಹುಕಾರ್ ಅವರ ಕೊಡುಗೆ ಅವಿಸ್ಮರಣೀಯ ….ಅನವರತ.….ಅನಂತ……ನಿಮ್ಮ ಪುತ್ಥಳಿಯ ಪ್ರತಿಬಿಂಬ ನಮಗೆ ದಾರಿದೀಪವಾಗಲಿ….
ಹ್ಯಾಟ್ಸ ಆಫ್ ಟು ಯು ಸಾಹುಕಾರರೇ….
ಪ್ರವೀಣ ಮೊಗವೀರ ಗಂಗೊಳ್ಳಿ
ಸಂಪಾದಕರು ,ಕುಂದವಾಹಿನಿ ಅಂತರ್ಜಾಲ ಸುದ್ದಿತಾಣ