ಗಂಗೊಳ್ಳಿ( ಏ.13): ಇಲ್ಲಿನ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿಯಲ್ಲಿ ಕಳೆದ ಶನಿವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಈ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ ದೇವಾಡಿಗನಿಂದ ಸ್ಯಾಕ್ಸೋಪೋನ್ ವಾದನದ ಕರ್ಯಕ್ರಮ ನಡೆಯಿತು.
ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಚಲನಚಿತ್ರ ಗೀತೆಯ ಜೊತೆಗೆ ರಾಷ್ಟ್ರಗೀತೆಯನ್ನು ನುಡಿಸಿ ಮೆಚ್ಚುಗೆ ಗಳಿಸಿದ ಸಂಜಿತ್ ಎಂ ದೇವಾಡಿಗನನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಸ್. ಡಿ. ಎಂ. ಸಿ .ಅಧ್ಯಕ್ಷ ರವಿಶಂಕರ್ ಖಾರ್ವಿ, ಉಪಾಧ್ಯಕ್ಷೆ ರೇಣುಕಾ, ಎಸ್. ಡಿ. ಎಂ. ಸಿ ಸದಸ್ಯರು, ಸಿ ಆರ್. ಪಿ ಸೌಪರ್ಣಿಕ, ಮುಖ್ಯೋಪಾಧ್ಯಾಯರಾದ ಸುಮತಿ, ಶಿಕ್ಷಕಿಯರಾದ ಯಶೋಧ, ಅನುಷಾ ಆಶಾಲತಾ,ಉಷಾ, ಮಮತಾ ಮತ್ತು ಸರಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಉಮೇಶ್ ಸ್ವಾಗತಿಸಿದರು. ಶಿಕ್ಷಕ ಶಶಿಶಂಕರ್ ಸ್ವಾಗತಿಸಿ ವಂದಿಸಿದರು.