ಕುಂದಾಪುರ (ಏ.26): ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಕುಂದಾಪುರ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಕಾಳಾವರ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು .
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಯವರು ಮಾತನಾಡಿ ಹುಟ್ಟಿನಿಂದಲು ಅಸ್ಪ್ರಶ್ಯತೆ ಅಸಮಾನತೆಯಿಂದ ಶೋಷಣೆಗೆ ಒಳಪಟ್ಟು ನಂತರ ದಿನದಲ್ಲಿ ಅದನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಅವೀಸ್ಮರಣೀಯ, ಅವರ ಕಾರಣದಿಂದಾಗಿಯೇ ಇಂದು ಸಮಾಜದಲ್ಲಿ ಅಸ್ಪ್ರಶ್ಯತೆ ಅಸಮಾನತೆ ಹೋಗಲಾಡಿ ಸಮಾಜದಲ್ಲಿ ಸರ್ವರೂ ಸಮಾನತೆಯಿಂದ ಬದುಕುವಂತಾಗಿದೆ, ಅವರು ರಚಿಸಿಕೊಟ್ಟ ಸಂವಿಧಾನದಿಂದಾಗಿಯೇ ದೇಶದಲ್ಲಿ ಇಂದು ಶಾಂತಿ ಸುವ್ಯವಸ್ಥೆ ಹತೋಟಿಯಲ್ಲಿದೆ, ಪಕ್ಷದ ಸೂಚನೆಯಂತೆ ಇಂದು ಮಂಡಲದ ಪ್ರತಿ ಬೂತ್ ಗಳಲ್ಲೂ ಅವರಿಗೆ ಗೌರವ ಅರ್ಪಿಸಲಾಗುತ್ತಿದೆ, ಅವರ ಬದುಕು ನಮಗೆ ಎಂದಿಗೂ ಆದರ್ಶ ಎಂದರು.
ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್ ಕೊಳ್ಕೆರೆ, ಕುಂದಾಪುರ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಕಡ್ಗಿಮನೆ, ಪುರಸಭೆ ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಸದಸ್ಯ ರತ್ನಾಕರ ಶೇರಿಗಾರ್, ಎಸ್ಸಿ ಮೋರ್ಚಾ ಕಾರ್ಯದರ್ಶಿ ದಿನೇಶ್ ಕಾಳಾವರ, ಕಾರ್ಯಕಾರಿಣಿ ಸದಸ್ಯ ಪ್ರದೀಪ್ ಕೊಳ್ಕೆರೆ, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ, ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌರಭಿ ಪೈ, ಕಾರ್ಯದರ್ಶಿ ರೋಹಿಣಿ ಪೈ ಮತ್ತು ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.