ಕುಂದಾಪುರ ( ಏ.18): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ,ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ .ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ ದೇವಾಡಿಗ ಹಾಗೂ ಸುಮಧುರ ಶೆಟ್ಟಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದರ ಜೊತೆಗೆ ಬಿ.ಸಿ.ಎ ಪದವಿಯಲ್ಲಿ ಮೂರನೇ ರ್ಯಾಂಕ್ ಹಾಗೂ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಹಾಗೆಯೇ ಅಂತಿಮ ಪದವಿ ಬಿ.ಕಾಂ ಫೈನಾನ್ಸಿಯಲ್ ಎಕೌಂಟಿಂಗ್ ವಿಷಯದಲ್ಲಿ ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಪಿ.ಎಸ್ ,ಅಂಕಿತಾ,ಸುಚಿತ್ರಾ ಶೆಟ್ಟಿ ,ಬಿ.ಬಿ ಹಾಜಿರಾ ಹಾಗೂ ಅನನ್ಯ ರವರು ಐಸಿಎಐ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ,ಪ್ರಾಂಶುಪಾಲರು ಹಾಗೂ ಭೋಧಕ & ಭೋಧಕೇತರ ವ್ರಂದ ಅಭಿನಂದನೆ ಸಲ್ಲಿಸಿದ್ದಾರೆ.



.










