ಬ್ರಹ್ಮಾವರ( ಏ,23): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ,ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ.) ,ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಮೊಗವೀರ ಸಮುದಾಯದ 13 ನೇ ವರ್ಷದ ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ ಏ.23ರಂದು ಬ್ರಹ್ಮಾವರದ ಶಾಮಿಲಿ ಶನಾಯ ಸಭಾಭವನದಲ್ಲಿ ನಡೆಯಿತು.
ನಾಡೋಜ ಡಾ.ಜಿ.ಶಂಕರ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಇದರ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಹಿರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾಮೂಹ ವಿವಾಹ ಕಾರ್ಯಕ್ರಮದ ರೂಪುರೇಷೆಗಳನ್ನು ಸಂಘಟನೆಯ ಸದಸ್ಯರಿಗೆ ತಿಳಿಸಿದರು. ಹಾಗೆಯೇ ಇತ್ತೀಚಿಗೆ ನಡೆದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಘಟನೆಯ ಸ್ವಯಂಸೇವಕರಿಗೆ ಧನ್ಯವಾದ ಸಲ್ಲಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶಿವರಾಮ್ ಕೆ.ಎಮ್. ,ಶ್ರೀ ವಿನಯ್ ಕರ್ಕೇರ ,ಶ್ರೀ ಗಣೇಶ್ ಕಾಂಚನ್ ಹಾಗೂ ಕೋಶಾಧಿಕಾರಿ ಶೇಖರ್ ಮರಾತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರವೀಶ್ ಕೊರವಾಡಿ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮ ನಿರೂಪಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ, 4 ರ ಗೋಧೋಳಿ ಲಗ್ನ ಸಮುಹೂರ್ತದಲ್ಲಿ ಹಾಲಾಡಿಯ ಶಾಲಿನಿ.ಜಿ.ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದ್ದು ,ಅದಕ್ಕೆ ಪೂರ್ವಭಾವಿಯಾಗಿ ನಡೆಯುವ ವಿಳ್ಯಶಾಸ್ತ್ರ ಕಾರ್ಯಕ್ರಮ ಇದೇ ಏಪ್ರಿಲ್ ,27. ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾ ಭವನದಲ್ಲಿ ನಡೆಯಲಿದ್ದು, ಈ ವಿವಾಹ ಕಾರ್ಯಕ್ರಮಕ್ಕೆ ಜೋಡಿಗಳನ್ನು ನೋಂದಾಯಿಸಲಿಚ್ಚಿಸುವವರು ಈ ಕೆಳಕಂಡ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.
ಶ್ರೀ ರಾಜೇಂದ್ರ ಹಿರಿಯಡ್ಕ -9845208043