ಕುಂದಾಪುರ ( ಏ.24): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ದೇವಾಡಿಗ ಬಿ.ಸಿ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ.ಉಮೇಶ್ ಶೆಟ್ಟಿ ಹಾಗೂ ಭೋಧಕ ವರ್ಗ ಕಾವ್ಯಾರವರ ಸ್ವಗ್ರಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕಾವ್ಯಾ ಹಾಗೂ ಅವರ ತಾಯಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸೌಮ್ಯ ಕುಂದರ್, ಉಪನ್ಯಾಸಕರಾದ ವಿನೀತಾ ಗಾಣಿಗ , ತ್ರಿವರ್ಣ ಕಂಡ್ಲೂರು , ಸುಜಯ್ ದೇವಾಡಿಗ ಹಾಗೂ ಕಾವ್ಯಾ ದೇವಾಡಿಗರ ಮನೆಯವರು ಉಪಸ್ಥಿತರಿದ್ದರು.