ಕೋಟೇಶ್ವರ(ಏ.29): ಕೋಟೇಶ್ವರದ ಮಾರ್ಕೊಡಿನ ನಾಗಯಕ್ಷಿ ದೇವಸ್ಥಾನ ದ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ನಾಗಯಕ್ಷಿ ಯಕ್ಷಕೂಟ ಇದರ 2ನೇ ವರ್ಷದ ಯಕ್ಷಪರ್ವ ಕಾರ್ಯಕ್ರಮ ಏ.23ರಂದು ಜರುಗಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಹಾಗೂ ಬಡಗು ತಿಟ್ಟಿನ ಪ್ರಸಿದ್ದ ಭಾಗವತರಾದ ಶ್ರೀ ಪ್ರಸಾದ ಕುಮಾರ್ ಮೊಗೆಬೆಟ್ಟು ಕಾರ್ಯವನ್ನು ಉದ್ಘಾಟಿಸಿದರು.
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ಅಧ್ಯಕ್ಷ ಕೆ.ಸುರೇಶ ವಿಠಲವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತರಾದ ಜಿ.ರಾಘವೇಂದ್ರ ಮಯ್ಯ ಹಾಲಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ|ನಾಗೇಶ, ಕೋಟೇಶ್ವರದ ನಾರಾಯಣ ಹೆಲ್ತ್ಕೇರ್ನ ಡಾ|ಪ್ರಸಾದ ಶೆಟ್ಟಿ,
ನಾಗಯಕ್ಷಿ ಯಕ್ಷಕೂಟ ಮಾರ್ಕೋಡು ಇದರ ಗೌರವಾಧ್ಯಕ್ಷರಾದ ಜಗದೀಶ ಮೊಗವೀರ, ಕೋಟೇಶ್ವರ ಗ್ರಾಮ ಪಂಚಾಯಿತ್ ಅಧ್ಯಕ್ಷ ಕೃಷ್ಣ ಗೊಲ್ಲ, ಪಂಚಾಯತ್ ಸದಸ್ಯ ಚಂದ್ರ ಮೋಹನ್, ಜಯಲಕ್ಷ್ಮೀ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಬೇಳೂರು ವಿಷ್ಣುಮೂರ್ತಿ ನಾಯಕ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಕೋಟೇಶ್ವರ ಸ.ಪ.ಪೂ ಕಾಲೇಜು ಉಪನ್ಯಾಸಕ, ತಾಳಮದ್ದಲೆ ಅರ್ಥಧಾರಿ ಶಂಕರನಾರಾಯಣ, ಆಲ್ ಇಂಡಿಯಾ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ವಿಜೇತೆ ಧನ್ವಿತಾ, ಆಲ್ ಇಂಡಿಯಾ ಕರಾಟೆ ಚಾಂಪಿಯನ್ಶಿಫ್ನಲ್ಲಿ ಕಂಚಿನ ಪದಕ ವಿಜೇತೆ ಸಾನಿಕಾ ರವರನ್ನು ಅಭಿನಂದಿಸಲಾಯಿತು.
ಸ.ಹಿ.ಪ್ರಾ.ಶಾಲೆ ಕೊರವಡಿಯ ಶಿಕ್ಷಕಿ ಶೋಭಾ ದಿನೇಶ ಪೂಜಾರಿ ಸ್ವಾಗತಿಸಿದರು, ಮೂಡು ಗೋಪಾಡಿ ಸ.ಹಿ.ಪ್ರಾ.ಶಾಲೆ ಶಿಕ್ಷಕಿ ಹೇಮಲತಾ ಗಣೇಶ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಶ್ರೀ ನಾಗಯಕ್ಷಿ ಯಕ್ಷಕೂಟದ ಉಪಾಧ್ಯಕ್ಷ ಆನಂದ ಬರೆಕಟ್ಟು, ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮಾರ್ಕೋಡು, ಕೋಶಾಧಿಕಾರಿ ಉಷಾ ಸಹಕರಿಸಿದರು.
ಸಭಾ ಕಾರ್ಯಕ್ರಮದ ನಂತರ ಬೇಳೂರು ವಿಷ್ಣುಮೂರ್ತಿ ನಾಯಕ್ ರವರ ನಿರ್ದೇಶನದಲ್ಲಿ ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ವಿದ್ಯಾರ್ಥಿಗಳಿಂದ ಶಕ್ತಿ ಶರ ಸಂಧಾನ, ಶಿವರಾಮ ದರ್ಶನ’ ಯಕ್ಷಗಾನ ಪ್ರದರ್ಶನಗೊಂಡಿತು.