ಕಮಲಶಿಲೆ( ಮೇ,09): ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ,ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ದೇವಿಯ ಭಕ್ತಿ ಗೀತೆ” ಶ್ರೀ ಬ್ರಾಹ್ಮಿ ಗೀತಾಮೃತ”ವನ್ನು ಮೇ, 8 ರ ಆದಿತ್ಯವಾರದಂದು ಕ್ಷೇತ್ರದ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರರವರು ದೇವಳದ ಮುಂಭಾಗದಲ್ಲಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ, ಜೊತೆ ಧರ್ಮದರ್ಶಿ ಆಜ್ರಿ ಚಂದ್ರಶೇಖರ ಶೆಟ್ಟಿ, ಭಕ್ತಿಗೀತೆಗಳ ನಿರ್ಮಾಪಕ ಸುಕುಮಾರ್ ಶೆಟ್ಟಿ ಕಮಲಶಿಲೆ, ಭಕ್ತಿ ಗೀತೆಗಳ ಗೀತಸಾಹಿತಿ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗೀತ ಗಾಯಕರಾದ ಕೃಷ್ಣ ಸಾಸ್ತಾನ, ವಿಜಯಲಕ್ಷ್ಮಿ ಮೆಟ್ಟಿನಹೊಳೆ, ಪ್ರಾಪ್ತಿ ಹೆಗ್ಡೆ,ಕುಂದಾಪುರ ಮುಂತಾದವರು ಉಪಸ್ಥಿತರಿದ್ದರು.

ಸಿದ್ದಾಪುರದ ಖ್ಯಾತ ವೈದ್ಯರಾದ ಡಾ. ಜಗದೀಶ್ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಧರ್ಮದರ್ಶಿ ಸಚ್ಚಿದಾನಂದ ಯವರು ಭಕ್ತಿಗೀತೆಗಳ ತಂಡಕ್ಕೆ ಶಾಲು ಹೊದಿಸಿ ಸನ್ಮಾನಿಸಿ, ಶುಭ ಆಶೀರ್ವದಿಸಿದರು.














