ಕೋಟೇಶ್ವರ(ಮೇ,14): ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕರಾದ ಸುಣ್ಣಾರಿ, ಶ್ರೀ ಕಿಶೋರ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ 2021-22 ನೇ ಸಾಲಿನ ಆಯವ್ಯಯವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಘುರಾಮ ಶೆಟ್ಟಿ ಸಭೆಯಲ್ಲಿ ಮಂಡಿಸಿದರು.
2022-23ನೇ ಸಾಲಿನ ಖರ್ಚು ವೆಚ್ಚಗಳ ಬಗ್ಗೆಐದು ಜನ ಗೌರವ ಶಿಕ್ಷಕರ ಸಂಬಳ, ಶಾಲಾ ವ್ಯಾನ್ ನಿರ್ವಹಣೆ ಅದರ ಬಗ್ಗೆ, ಹಣ ಕ್ರೋಡಿಕರಣ, ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಆ ಸಂದರ್ಭ ನಿವೃತ್ತ ಎಕ್ಸಿಕ್ಯೂಟಿವ್ ಇಂಜೀನಿಯರ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಮಂಡಾಡಿ ಶ್ರೀ ರತ್ನಾಕರ ಶೆಟ್ಟಿ, ವಿಜಯ ಬ್ಯಾಂಕ್, ನಿವೃತ್ತ ಸೀನಿಯರ್ ಮನೇಟರ್ ಹಾಗೂ ಆಡಳಿತ ಮಂಡಳಿ ಸದಸ್ಯ ಹೊಂಬಾಡಿ ಶ್ರೀ ಜಗನ್ನಾಥ ಶೆಟ್ಟಿ ಪ್ರತಿ ವರ್ಷ ಒಬ್ಬೊಬ್ಬ ಶಿಕ್ಷಕರ ಸಂಬಳಕ್ಕಾಗಿ ಚೆಕ್ನ್ನು ಶಾಲಾ ಸಂಚಾಲಕರಾದ ಶ್ರೀ ಎಸ್ ಕಿಶೋರ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಇನ್ನೊರ್ವ ಶಾಲಾ ಆಡಳಿತ ಮಂಡಳಿ ಸದಸ್ಯ ಬೆಂಗಳೂರಿನ ಉದ್ಯಮಿ ಮಂಡಾಡಿ ಶ್ರೀ ಲಕ್ಷ್ಮಣ ಶೆಟ್ಟಿ ಮುಂದಿನ ವರ್ಷದ ನಿರ್ವಹಣೆ ಸಂಬಂಧಿಸಿದಂತೆ ಅದಕ್ಕೆ ತಗಲುವ ವೆಚ್ಚಕ್ಕಾಗಿ ಚೆಕ್ನ್ನು ಹಸ್ತಾಂತರಿಸಿದರು. ಪ್ರತಿ ವರ್ಷ ಎರಡು ಗೌರವ ಶಿಕ್ಷಕರಿಗೆ ಡಾ. ಎಸ್ ಜಯರಾಮ್ ಶೆಟ್ಟಿ ಮತ್ತು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಡಾ. ಎಸ್ ರಮಾನಂದ ಶೆಟ್ಟಿ ಮತ್ತು ಒರ್ವ ಗೌರವ ಶಿಕ್ಷಕರಿಗೆ ಕೆ.ಬಿ ರಾಮಣ್ಣ ಶೆಟ್ಟಿ, ಸ್ಮರಣಾರ್ಥ ಪತ್ನಿ ಶೀಲಾವತಿ ಆರ್ ಶೆಟ್ಟಿ ಮತ್ತು ಮಕ್ಕಳು ಪ್ರತಿ ವರ್ಷ ನೀಡಲಿದ್ದಾರೆ. ಹಾಗೆಯೇ ಕಾಪು ಮುದ್ದಣ್ಣ ಶೆಟ್ಟಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಕಾರ್ಯದರ್ಶಿಯಾದ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸಿಕೊಡಲು ಎಸ್ ಕಿಶೋರಕುಮಾರ್ ಒಪ್ಪಿರುತ್ತಾರೆ.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಕೆ.ಸಂಜೀವ ಶೆಟ್ಟಿ ,ನಿವೃತ್ತ ಮುಖ್ಯ ಶಿಕ್ಷಕ, ಶ್ರೀ ವಿ.ಚಂದ್ರಶೇಖರ ಹೆಗ್ಡೆ ಉದ್ಯಮಿ, ಶ್ರೀ ಎಸ್. ಪ್ರಸನ್ನ ಕುಮಾರ ಶೆಟ್ಟಿ, ಶ್ರೀ ಎಸ್ ಮಂಜು ಉಪಸ್ಥಿತರಿದ್ದರು.
ಶಾಲಾ ಶೈಕ್ಷಣಿಕ ಸಲಹೆಗಾರ ಉಪನ್ಯಾಸಕ ಕಾಳಾವರ ಶ್ರೀ ಉದಯ ಕುಮಾರ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.