ಕುಂದಾಪುರದ ಡಾ|| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಅನುಬಂಧ – ಇದು ರಕ್ತದ ಸಂಬಂಧ ಎನ್ನುವ ಕಿರುಚಿತ್ರ ಇಂದು ಬಿಡುಗಡೆಗೊಂಡಿದೆ. ಒಮ್ಮೆ ಕಾಣುವ ತವಕದಲ್ಲಿದ್ದ ನಾನು ಹೊತ್ತು ಬಿಡುವು ಮಾಡಿ ನೋಡಿದೆ, ಮೊದಲರ್ಧ ಭಾಗ ನೋಡುತ್ತಿದ್ದಂತೆ ಕುತೂಹಲ ಹುಟ್ಟಿತ್ತು. ರಕ್ತದ ಅಗತ್ಯಕ್ಕೆ ಕರೆ ಬಂದ ಸಂಗತಿ ಕೇಳಿದ ಸ್ನೇಹಿತರು ನಿರ್ಲಕ್ಷಿಸಿ ಸಿನೆಮಾ ನೋಡಲು ಹೋದರೆ ಇಲ್ಲಿ ನಡೆದ ಘಟನೆಯೇ ಬೇರೆ. (ಪೂರ್ತಿ ಚಿತ್ರ ನೋಡಿದರೆ ಅರ್ಥವಾಗುವುದು) ಯಾಕೋ ಗೊತ್ತಿಲ್ಲ ನೋಡ ನೋಡುತ್ತಿದ್ದಂತೆ ನನಗರಿವಿಲ್ಲದ ಹಾಗೆ ಕಣ್ಣಲ್ಲಿ ನೀರು ಜಿನುಗಿತ್ತು. ಅದಂತೂ ಕರುಳು ಹಿಂಡುವ ದ್ರಶ್ಯ. ನೀರ್ಜನ ಸ್ಥಳಲ್ಲಿದ್ದ ನಾನು ನನ್ನ ಸುತ್ತ ಮುತ್ತ ಕಣ್ಣ ಹಾಯಿಸಿದೆ, ಯಾರಾದರೂ ನನ್ನನ್ನ ಕಂಡರೆ… ಹಾಗೆಯೇ ಹೆಗಲ ಮೇಲಿದ್ದ ಶಾಲಿನಿಂದ ಎರಡೂ ಕಣ್ಣನ್ನು ಒರೆಸಿಕೊಂಡೆ ನಿಜಕ್ಕೂ ಇದು ಉತ್ಪ್ರೇಕ್ಷೆಯ ಮಾತಲ್ಲ. ಇತ್ತೀಚೆಗೆ ಅಲ್ಯಾರೋ ಬೈಕ್ ಅಪಘಾತದಲ್ಲಿ ಬಿದ್ರು, ಇಲ್ಯಾರೋ ಕಾರ್ ಅಪಘಾತದಲ್ಲಿ ಸಾವು ಬದುಕಿನ ನಡುವೆ ಒದ್ದಾಡ್ತಾ ಇದ್ರು ಅಂದಾಗ ಕಿವಿ ಕೊಡದ ನಾವು ನಮ್ಮದೇ ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಕ್ಷರಸಹ ಸತ್ಯ. ಪ್ರತಿ ಜೀವವು ನಮ್ಮದೇ, ಪ್ರತಿ ವ್ಯಕ್ತಿವೂ ನಮ್ಮವರೇ ಎಂದುಕೊಂಡರೆ ಯಾರೇ ಎಲ್ಲೇ ಅಪಘಾತಕ್ಕೋಳಗಾದರೆ ಆ ಕ್ಷಣಕ್ಕೆ ಸ್ಪಂದಿಸುವ ಗುಣ ಈ ಚಿತ್ರ ಕಂಡಾಗಲೆ ಅರಿವಾಗುತ್ತದೆ. ಈ ಕಲ್ಪನೆ ಯಾವ ವಿದ್ಯಾರ್ಥಿಗೆ ಬಂತೋ ನಾನರಿಯೇ, ಆದರೆ ಆ ವಿದ್ಯಾರ್ಥಿಗೆ ನನ್ನದೊಂದು ಸೆಲ್ಯೂಟ್. ಪ್ರಸನ್ನ ಶೆಟ್ಟಿ, ಸಂಪತ್ ಶೆಟ್ಟಿ ಹಾಗೂ ಎಲ್ಲಾ ವಿದ್ಯಾರ್ಥಿಗಳ ಆ್ಯಕ್ಟಿಂಗ್ ಸೂಪರ್. ನನಗಂತೂ ಇದು ಕಥೆಯಲ್ಲ ನೈಜತೆಗೆ ತೀರಾ ಹತ್ತಿರ ಅನ್ನಿಸಿತು. ಚಿತ್ರ ನಿರ್ದೇಶಕರಿಗೂ, ಪ್ರಾಂಶುಪಾಲರಿಗೂ, ಉಪಪ್ರಾಂಶುಪಾಲರಿಗೂ, ಚಿತ್ರಗ್ರಾಹಕರಿಗೂ ಅಭಿನಯಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು.
ಲೇಖನ :ರಾಮ ಶೆಟ್ಟಿ ಅತ್ತಿಕಾರ್