ಕುಂದಾಪುರ (ಜೂ ,27): ಜೂನ್ 05 ರ ವಿಶ್ವ ಪರಿಸರ ದಿನದ ಅಂಗವಾಗಿ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಶಾಲೆಯಲ್ಲಿ ವಿಶ್ವಪರಿಸರ ದಿನ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಾತಾನಾಡಿ ಪ್ರತಿಯೊಬ್ಬರು ಗಿಡ-ಮರ ನೆಟ್ಟು ಬೆಳಸಿ ಹಸಿರೇ ಉಸಿರಾಗಿರುವಂತೆ ಮತುವರ್ಜಿವಹಿಸಬೇಕೆಂದರು.
ಶಾಲೆಯ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಖಜಾಂಚಿಯಾದ ಭರತ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಸಾಲುಮರದ ತಿಮ್ಮಕ್ಕನಂತೆ ಪರಿಸರ ಉಳಿಸಿ ಬೆಳೆಸುವ ಕಾಳಜಿಯನ್ನು ಮೈಗೂಡಿಕೊಳ್ಳಬೇಕೆಂದರು. ವಿಶ್ವ ಪರಿಸರ ದಿನದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯು ಚಿತ್ರಕಲಾ ಶಿಕ್ಷಕರಾದ ಗಿರೀಶ್ರವರ ಮಾರ್ಗದರ್ಶನದಲ್ಲಿ ನಡೆಯಿತು.
ಎಕ್ಸಲೆಂಟ್ ಮುಖ್ಯಶಿಕ್ಷಕಿಯಾದ ಶ್ರೀಮತಿ ಸುರೇಖಾರವರು ಮಕ್ಕಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜ ಶೆಟ್ಟಿ, ಗುರುಪ್ರಸಾದ್, ನಿರೇಶ್, ಧೀರಜ್, ಸರೋಜಿನಿ, ಶ್ವೇತಾ ಮೊದಲಾದವರು ಉಪಸ್ಥಿತರಿದ್ದರು.