ಗಂಗೊಳ್ಳಿ(ಜು,2): ವೈದ್ಯರ ದಿನಾಚರಣೆಯ ಪ್ರಯುಕ್ತ ಗಂಗೊಳ್ಳಿ ರೋಟರಿ ಕ್ಲಬ್ ನ ವತಿಯಿಂದ ಗಂಗೊಳ್ಳಿಯ ಚಂದ್ರ ನರ್ಸಿಂಗ್ ಹೋಮಿನ ನಿರ್ದೇಶಕರಾದ ಡಾ. ಮಹೇಶ್ ಜಿ ಹಾಗೂ ಡಾ ಸುಜಾತ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯ್ಷತೆಯನ್ನು ರೋಟರಿಯ ಅಧ್ಯಕ್ಷರಾದ ಸುಗುಣ ಆರ್. ಕೆ ವಹಿಸಿಕೊಂಡಿದ್ದರು. ರೊಟೇರಿಯನ್ ರಾಮನಾಥ್ ನಾಯಕ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವೆಕೇಷನ್ ಸರ್ವಿಸ್ ಚೆರ್ಮನ್ ಗೋಪಾಲ್ ಅವರು ಸನ್ಮಾನವನ್ನು ನೆರವೇರಿಸಿದರು. ರೋಟೇರಿಯನ್ ಉಮೇಶ್ ಮೇಸ್ತ ವೈದ್ಯ ದಂಪತಿಗಳ ಸೇವೆಯನ್ನು ಶ್ಲಾಘಿಸಿದರು. ಕ್ಲಬ್ ನ ಕಾರ್ಯದರ್ಶಿ ರೋಟೇರಿಯನ್ ಚಂದ್ರಕಲಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸದಸ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.