ಕೋಟೇಶ್ವರ( ಆ,12): ಬೀಜಾಡಿ ಕಡಲತೀರದಲ್ಲಿ ಮೊಗವೀರ ಯುವ ಸಂಘಟನೆ(ರಿ),ಉಡುಪಿ ಇದರ ಕೋಟೇಶ್ವರ ಘಟಕ ನೇತ್ರತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಸಮುದ್ರ ಪೂಜೆ ನಡೆಯಿತು.
ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಶ್ರೀ ಚಿಕ್ಕುಅಮ್ಮ ದೇವರಿಗೆ ಪೂಜೆ ಸಲ್ಲಿಸಿ ಸುಮಾರು 250 ಜನ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಸಮುದ್ರ ತೀರಕ್ಕೆ ತೆರಳಿ ಸಮುದ್ರ ದೇವನಿಗೆ ಪೂಜೆಸಲ್ಲಿಸಿ ಬಾಗೀನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಗುರಿಕಾರರುಗಳು, ಭಾಗದ ಮೀನುಗಾರರು ಉಪಸ್ತಿತರಿದ್ದರು. ವೇದಮೂರ್ತಿಗಳು ಪೂಜಾ ವಿದಾನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ 8 ಜನ ಹಿರಿಯ ಮೀನುಗಾರರನ್ನು ಇಬ್ಬರು ಹಿರಿಯ ಮಹಿಳಾ ಮೀನು ವ್ಯಾಪಾರಸ್ತರನ್ನು ಸನ್ಮಾನಿಸಲಾಯಿತು. ಸಾಮೂಹಿಕವಾಗಿ ಸಮಸ್ತ ಮೀನುಗಾರರ ರಕ್ಷಣೆಗಾಗಿ, ಮತ್ಸ್ಯ ಸಂಪತ್ತಿನ ವೃದ್ದಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಕೋಟೇಶ್ವರ ಘಟಕದ ಅಧ್ಯಕ್ಷರಾದ ಸುನೀಲ್ ಜಿ. ನಾಯ್ಕ್, ಸಂಘಟನೆಯ ಹಿರಿಯರಾದ ರಾಮನಾಯ್ಕ್ ಬೀಜಾಡಿ, ಸತೀಶ್ ಎಮ್ ನಾಯ್ಕ್, ಜಗದೀಶ್ ಮೊಗವೀರ, ಅಶೋಕ್ ತೆಕ್ಕಟ್ಟೆ, ಗೌರವಾಧ್ಯಕ್ಶರಾದ ಸೌರಭ ರಾಜೀವ ಮರಕಾಲ, ನಿಕಟಪೂರ್ವ ಅಧ್ಯಕ್ಷ ರವೀಶ್ ಕೊರವಡಿ, ಕಾರ್ಯದರ್ಶಿ ಪುಂಡಲೀಕ ಮೊಗವೀರ, ಮಹಿಳಾ ಕಾರ್ಯದರ್ಶಿ ಉಶಾ ಬಂಗೇರ ಮಾರ್ಕೋಡು, ಸುರೇಶ್ ಶಾನಾಡಿ, ಭಾಸ್ಕರ್ ಹಳೆಅಳಿವೆ, ಕೋಶಾಧಿಕಾರಿ ಪ್ರದೀಪ್ ಮೊಗವೀರ ಹೊದ್ರಾಳಿ, ರಾಘವೇಂದ್ರ ಹಳೆಅಳಿವೆ, ಶ್ರೀಮತಿ ಶಾರದಾ ಮೂಡುಗೋಪಾಡಿ, ಶ್ರೀಧರ್ ಬಿ. ಎನ್, ಹೇಮಾ ತೆಕ್ಕಟ್ಟೆ ಹಾಗೂ ಚಿಕ್ಕುಅಮ್ಮ ದೈವಸ್ತಾನದ ಅಧ್ಯಕ್ಷರಾದ ಶ್ರೀನಿವಾಸ ಕುಂದರ್, ಶೇಖರ್ ಚಾತ್ರಬೆಟ್ಟು, ಬಾಬಣ್ಣ ಪೂಜಾರಿ, ಶಂಕರ್ ಚಾತ್ರಬೆಟ್ಟು, ಪುಂಡಲೀಕ ಬಂಗೇರ ,ರತ್ನ ಮೊಗವೀರ ಬೀಜಾಡಿ, ರಮೇಶ್ ಕಾಂಚನ್ , ಮಂಜುನಾಥ ಕುಂದರ್ , ಸುರೇಶ್ ಚಾತ್ರಬೆಟ್ಟು, ಗುರಿಕಾರರುಗಳು, ಮೀನುಗಾರರು ಉಪಸ್ತಿತರಿದ್ದರು.
ವೇದಮೂರ್ತಿ ಆನಂದ ಬಿಳಿಯ ಪೂಜಾ ವಿಧಾನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಾಗದ ಹಿರಿಯ ಮೀನುಗಾರರನ್ನು, ಮಹಿಳಾ ಮೀನು ವ್ಯಾಪರಸ್ತರನ್ನು ಸನ್ಮಾನಿಸಲಾಯಿತು. ಸಾಮೂಹಿಕವಾಗಿ ಸಮಸ್ತ ಮೀನುಗಾರರ ರಕ್ಷಣೆಗಾಗಿ, ಮತ್ಸ್ಯ ಸಂಪತ್ತಿನ ವೃದ್ದಿಗಾಗಿ ಪ್ರಾರ್ಥನೆ ಮಾಡಲಾಯಿತು. ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಬೀಜಾಡಿ ಇವರ ಭಜನೆ ಮತ್ತು ಸವಿನಯ ಚಂಡೆ ಗೋಪಾಡಿ ಇವರ ಚಂಡೆ ವಾದನ ಕಾರ್ಯಕ್ರಮಕ್ಕೆ ರಂಗು ತಂದುಕೊಟ್ಟಿತು.