ಕಾರ್ಕಳ (ಸೆ,17): ಇಲ್ಲಿನ ಕ್ರಿಯೇಟಿವ್ ಪಿ ಯು ಕಾಲೇಜು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಜಿ.ಎಸ್ .ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತಾಗಿ ಮಾಹಿತಿ ಕಾರ್ಯಗಾರವನ್ನು ಸೆ.17ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ತೆರಿಗೆ ಸಲಹೆಗಾರರಾದ ಶ್ರೀ ವಿನಯ್ ಹೆಗಡೆಯವರು ಜಿ.ಎಸ್.ಟಿ ಕುರಿತು ಮಾಹಿತಿಯನ್ನು ನೀಡಿದರು. ಜಿ.ಎಸ್.ಟಿ ಎನ್ನುವುದು ʼಒಂದು ದೇಶ-ಒಂದು ತೆರಿಗೆʼ ಪರಿಕಲ್ಪನೆಯಲ್ಲಿರುವ ಪರೋಕ್ಷ ತೆರಿಗೆಯಾಗಿದ್ದು, ಈ ತೆರಿಗೆಯು ಪ್ರತಿ ಮೌಲ್ಯದ ಸೇರ್ಪಡೆಗೆ ವಿಧಿಸುವ ತೆರಿಗೆಯಾಗಿರುತ್ತದೆ.
ಇಂದು ಜಿ.ಎಸ್.ಟಿ ಎನ್ನುವುದು ಶ್ರೀಸಾಮಾನ್ಯನಿಗೆ ಯಾವುದೇ ಹೊರೆಯಾಗದೇ, ಅಗತ್ಯ ಸರಕುಗಳ (ಬಿಡಿ ಸರಕುಗಳ) ಮೇಲೆ ಯಾವುದೇ ಜಿ.ಎಸ್.ಟಿ ಯನ್ನು ವಿಧಿಸದೇ ಇರುವುದು ಬಡವರಿಗೆ ಅನುಕೂಲವಾಗಿದೆ.ಎಲ್ಲಾ ಪರೋಕ್ಷ ತೆರಿಗೆಯನ್ನು ಒಂದೇ ಸೂರಿನಡಿಯಲ್ಲಿ ತಂದು ಕೇಂದ್ರ ಹಾಗೂ ರಾಜ್ಯಕ್ಕೆ ಸಮಪಾಲು ಕಂದಾಯವನ್ನು ನಿರ್ಧರಿಸುವ ತೆರಿಗೆಯು ದೇಶದ ಅಭಿವೃದ್ಧಿಗೆ ಪೂರಕವಾದುದು ಎಂದರು. ಜೊತೆಗೆ ಜಿ.ಎಸ್.ಟಿ ಹಂತಗಳು, GSTIN, e-way bill ಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಕಾಲೇಜಿನ ಸಹ ಸಂಸ್ಥಾಪಕರಾದ ಶ್ರೀ ಗಣಪತಿ ಕೆ ಎಸ್, ಉಪನ್ಯಾಸಕರಾದ ಶ್ರೀ ರಾಘವೇಂದ್ರ ಬಿ ರಾವ್, ಶ್ರೀ ಉಮೇಶ್ ಮತ್ತು ಶ್ರೀಮತಿ ಅಕ್ಷತಾ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.