ಕುಂದಾಪುರ(ಸೆ,21): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐ ಕ್ಯೂಎಸಿ ಆಶ್ರಯದಲ್ಲಿ ಸೆ .21 ರಂದು ನಡೆದ ಸಿಬ್ಬಂದಿ ಗುಣಮಟ್ಟ ಹೆಚ್ಚಿಸುವ (Faculty Development Programme) ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎಸ್.ಎಮ್.ಎಸ್. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಮಹೇಶ್ ಕುಮಾರ್, ಶಿಕ್ಷಕರಿಗೆ ಬೇಕಾದ ಗುಣಗಳು ಮತ್ತು ತರಗತಿಯ ಒಳಗೆ ಮತ್ತು ಹೊರಗೆ ಶಿಕ್ಷಕರು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ಬೇರೆ-ಬೇರೆ ಚಟುವಟಿಕೆಗಳ ಮೂಲಕ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ರೇವತಿ ಡಿ. ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕಿ ಅವಿತಾ ಎಮ್. ಕೊರೆಯಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ವಂದಿಸಿದರು.ವಾಣಿಜ್ಯ ಉಪನ್ಯಾಸಕರಾದ ಶರತ್ ಅತಿಥಿಗಳನ್ನು ಪರಿಚಯಿಸಿ, ಸುಧೀರ್ ಕುಮಾರ್ ನಿರೂಪಿಸಿದರು.