ಕಲ್ಯಾಣಪುರ( ಅ,16): ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಮತ್ತು ಕ್ಷಿಪಣಿ ತಂತ್ರಜ್ಞಾನದ ವಿಜ್ಞಾನಿ ದಿ. ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನವಾದ ಅಕ್ಟೋಬರ್ 15ನ್ನು ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯಾಗಿ ಆರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಕಲಾಂ ಅವರ ಜೀವನದ ವೈಶಿಷ್ಟ್ಯಗಳನ್ನು ಉಲ್ಲೇಖಿಸಿದರು. ವಿದ್ಯಾರ್ಥಿಗಳು ಕಲಾಂ ಅವರ ಜೀವನಶೈಲಿಯನ್ನು ಹೇಗೆ ಅನುಸರಿಸಬೇಕೆಂದು ಕಿವಿಮಾತು ಹೇಳಿದರು.ವೇದಿಕೆಯಲ್ಲಿ ಭಾಷಾ ವಿಭಾಗದ ಡೀನ್ ಪ್ರೊ. ಸೋಫಿಯಾ ಡಯಾಸ್ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕರುಗಳಾದ ಪ್ರೊ. ಕಾರ್ತಿಕ್ ನಾಯಕ್ ಮತ್ತು ಪ್ರೊ. ಹರಿಣಾಕ್ಷಿ ಎಂ. ಡಿ., ಗ್ರಂಥಪಾಲಕಿ ಪ್ರೊ. ರೇಖಾ ಉಪಸ್ಥಿತರಿದ್ದರು.
ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಲಕ್ಷ್ಮೀ ಇವರು ಈ ದಿನದ ಆಚರಣೆಯ ಮಹತ್ವದ ಕುರಿತಾಗಿ ಮಾತನಾಡಿ ಕಲಾಂ ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು,ತಾವು ಸ್ವತಃ ಕಲಿಕಾಸಕ್ತಿ ಹೊಂದಿದ್ದು ಮಕ್ಕಳೂ ಸಹ ಹೆಚ್ಚು ಹೆಚ್ಚು ಕಲಿಯಬೇಕೆಂದು ಅವರು ಬಯಸುತ್ತಿದ್ದರು ಎಂದರು. ತೃತೀಯ ಬಿ. ಕಾಂ. ವಿದ್ಯಾರ್ಥಿನಿ ವಫಾ ಅವರು ಮಾತನಾಡಿ ಕಲಾಂ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ್ದ ಸಾಧನೆಗಳನ್ನು ತಿಳಿಸಿದರು. ವಿದ್ಯಾರ್ಥಿನಿ ರಶ್ಮಿತಾ ಅವರು ಕಲಾಂ ಕುರಿತಾದ ಕವನ ವಾಚಿಸಿದರು.
ವಿದ್ಯಾರ್ಥಿನಿಯರಾದ ತ್ರೀಷಾ ಮತ್ತು ಕವಿತಾ ಕಲಾಂ ಅವರ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಮೋಹಿತ್ ಪೂಜಾರಿ ಕಲಾಂ ಅವರ ಚಿತ್ರಕ್ಕೆ ಬಣ್ಣ ತುಂಬಿದರು. ಇದೇ ಸಂದರ್ಭದಲ್ಲಿ ಗ್ರಂಥಪಾಲಕಿ ಶ್ರೀಮತಿ ರೇಖಾ ಅವರು ಕಲಾಂ ಅವರ ಪುಸ್ತಕಗಳ ಪ್ರದರ್ಶನ ಏರ್ಪಡಿಸಿದ್ದರು. ವಿದ್ಯಾರ್ಥಿನಿ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು.