ಕುಂದಾಪುರ (ಅ,19): ಕಾಂತಾರ ಸಿನೆಮಾ ದೇಶ- ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಕರಾವಳಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಂಬಿಕೆಗಳ ವೈಭವವನ್ನು ಮೆರೆಯುತ್ತಿರುವ ಸಂಧರ್ಭದಲ್ಲಿ ವರಹಾರೂಪಿ ಪಂಜುರ್ಲಿ ಮತ್ತು ದೈವದ ರೂಪ ದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4.00 ಅಡಿ ಎತ್ತರದ ಕಲಾಕೃತಿ ಕೋಟೇಶ್ವರ ಸಮೀಪದ ಹಳೆ ಅಳಿವೆ ಬೀಚ್ ನಲ್ಲಿ ಮರಳು ಶಿಲ್ಪದಲ್ಲಿ ಕಾಂತಾರ ” ಒಂದು ದಂತ ಕಥೆ ಆಕ್ರತಿಗೊoಡಿದೆ.
ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್ ಸ್ಯಾಂಡ್ ಥೀಮ್ ಉಡುಪಿಯ ತಂಡದಿಂದ ನಿರ್ಮಾಣಗೊಂಡಿರುವ ಈ ಮರಳು ಶಿಲ್ಪ ಸಾರ್ವಜನಿಕರನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ.