ಕುಂದಾಪುರ (ಅ,27): ಸಾಹಿತ್ಯ ತಂಗುದಾಣ ಬಳಗ ರಾಜ್ಯಮಟ್ಟದ ಭಾವ ಬರಹ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತರು ತಮ್ಮ ಜೀವನಕ್ಕೆ ಸಂಬಂಧಿಸಿದ ಯಾವುದೇ ವಸ್ತು ವಿಚಾರ ವ್ಯಕ್ತಿ ಸಂಬಂಧ ಕನಸು ಸ್ಥಳ ಸನ್ನಿವೇಶ ಇತ್ಯಾದಿ ವಿಷಯಗಳ ಬಗೆಗೆ ಭಾವನೆಗಳನ್ನು ಪ್ರಕಟಪಡಿಸುವಂತಹ ಬರಹವನ್ನು ಬರೆಯಬಹುದು.
ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನಗಳ ಜೊತೆಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಬರಹಗಳನ್ನು ವಾಟ್ಸಪ್ ಮೂಲಕ 9242127307 ಅಥವಾ ಇಮೇಲ್ ಮೂಲಕ sahithyathangudana@gmail.com ಗೆ ಕಳುಹಿಸಬಹುದಾಗಿದೆ. ಬರಹವನ್ನು ಕಳಿಸಲು ಕೊನೆಯ ದಿನಾಂಕ ನವೆಂಬರ್ 30 2022. ಈ ಸ್ಪರ್ಧೆ ಬಗೆಗೆ ಹೆಚ್ಚಿನ ಮಾಹಿತಿಗಾಗಿ 9242127307 ಸಂಪರ್ಕಿಸಲು ಕೋರಿದೆ.