ಕುಂದಾಪುರ (ಅ,27): ನೆಲದ ಸೊಗಡಿನ ಹಬ್ಬ ದೀಪಾವಳಿ. ಇದೊಂದು ಜನಪದ ಆಚರಣೆ, ಕೃಷಿ ಸಂಸ್ಕೃತಿಯನ್ನು ಬಿಂಬಿಸುದರ ಜೊತೆಗೆ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಾಧಿಸುವ ಹಬ್ಬ ಎಂದು ಹಿರಿಯ ಜಾನಪದ ಕಲಾವಿದರಾದ ಶ್ರೀ ನಾಗರಾಜ ಪಾಣ ಮೂಡುವಾಲ್ತೂರು ಅವರು ಹೇಳಿದರು.
ಅವರು ಅಕ್ಟೊಬರ್25 ರಂದು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ “ದೀಪಾವಳಿ ಆಚರಣೆ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ದೀಪಾವಳಿ ಮಹತ್ವದ ಕುರಿತು ಮಾತನಾಡಿದರು. ಉಪಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಚೇತನ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಉಪನ್ಯಾಸಕರಾದ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ ಸ್ವಾಗತಿಸಿ, ಶ್ರೀ ಸುಕುಮಾರ ಶೆಟ್ಟಿ ಕಮಲಶಿಲೆ ವಂದಿಸಿದರು. ವಿದ್ಯಾರ್ಥಿ ಕೀರ್ತನಾ ತೃತೀಯ ಬಿ.ಕಾಂ. ಬಿ. ಕಾರ್ಯಕ್ರಮ ನಿರೂಪಿಸಿದರು.
ಕಛೇರಿ ಸಿಬ್ಬಂದಿ ಸುಧೀಂದ್ರ ಕೆ. ಎಸ್ ದೀಪಾವಳಿ ಸಂಧರ್ಭದಲ್ಲಿ ಜನಪದರು ಹಾಡುವ ದೀಪಾವಳಿ ಸೊಲ್ಲನ್ನು ಹಾಡಿದರು. ಕಾಲೇಜಿನ ಭೋಧಕ ಭೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.