ಕುಂದಾಪುರ : ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ. ಜನವರಿ 29ರಂದು ವೈಭವದ ಪುರ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಗೆಂಡಸೇವೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಾತ್ರೆಯ ಪ್ರಯುಕ್ತ ಆಯೋಜಿಸಲಾಗಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.










