ಹೊಸಂಗಡಿ(ಅ,30): ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಇದರ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಪ್ರೌಢ ಶಾಲೆ, ಬಂಗ್ಲೆಗುಡ್ಡೆ ಇಲ್ಲಿ ಅ,29 ರ ಶನಿವಾರ ಉದ್ಘಾಟನೆಗೊಂಡಿತು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ಶೆಟ್ಟಿ ಇವರು ಶಿಬಿರ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಹಾಗೂ ಸ್ವಾವಲಂಬಿಯಾಗಿ ಬದುಕಬೇಕು, ಹಾಗೆ ಬದುಕಬೇಕಾದರೆ ಎನ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಶಾರದಾ ಗೊಲ್ಲ ಇವರು ವಹಿಸಿಕೊಂಡಿದ್ದು ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ನ ಮಹತ್ವ ಹಾಗೂ ಒಂದು ದಿನದ ಈ ಶಿಬಿರದಲ್ಲಿ ಏರ್ಪಡುವ ಅನ್ಯೋನ್ಯತೆ, ಸೇವಾ ಸ್ಪೂರ್ತಿ ಹಾಗೂ ಸಮಾಜ ಸೇವೆಯ ಕಲ್ಪನೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಬದ್ರಿಯಾ ಜಾಮಾ ಮಸೀದಿ ಯಾ ಖತಿಬರಾದ ಶ್ರೀಪಿ. ಜೆ ಅಹ್ಮದ್ ಮದನಿ ಇವರು ದೇಶ ಕಟ್ಟುವಲ್ಲಿ ಎನ್ಎಸ್ಎಸ್ ನ ಪಾತ್ರ ಪ್ರಮುಖ. ದಯೆಯೆ ಧರ್ಮದ ಮೂಲ ಮೊದಲು ದಯಾಪರತೆ ಬೆಳೆಸಿಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಶಂಕರ ಶೆಟ್ಟಿ ನೆಳಾಲು,ಶ್ರೀ ಆನಂದ ಶೆಟ್ಟಿ ಬಾಗಿಮನೆ, ಶ್ರೀಮತಿ ಯಶೋಧಾ ಶೆಟ್ಟಿ , ಶ್ರೀ ಅವಿನಾಶ್ ಶೆಟ್ಟಿ, ಶ್ರೀಗೋಪಾಲ ಭಟ್, ಪ್ರಾಂಶುಪಾಲರು, ಸ.ಪ.ಪೂ ಕಾಲೇಜು ಹೊಸಂಗಡಿ, ಶ್ರೀ ಉದಯ ನಾಯ್ಕ ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ ಸ.ಪ.ಪೂ ಕಾಲೇಜು ಹೊಸಂಗಡಿ, ಶ್ರೀ ಚಂದ್ರ ಜೋಗಿ ಕಾರ್ಯದರ್ಶಿಗಳು ಹಳೆ ವಿದ್ಯಾರ್ಥಿ ಸಂಘ ಸ.ಪ.ಪೂ ಕಾಲೇಜು ಹೊಸಂಗಡಿ ಇವರು ಆಗಮಿಸಿ ಎನ್ ಎಸ್ ಎಸ್ ಎನ್ನುವುದು ಎಷ್ಟೋ ವಿದ್ಯಾರ್ಥಿಗಳಲ್ಲಿ ಕೆಲವೇ ವಿದ್ಯಾರ್ಥಿಗಳಿಗೆ ಸಿಗುವ ಅದ್ಭುತ ಅವಕಾಶ. ಇಲ್ಲಿ ಪ್ರತಿ ಹಂತದಲ್ಲೂ ಕಲಿಯುವುದು ತುಂಬಾ ಇದೆ. ಜವಬ್ದಾರಿ ನಿರ್ವಹಣೆ, ಸಂಘಟನೆ ಸಾಮರ್ಥ್ಯ, ನಾಯಕತ್ವ ಗುಣ ವೇದಿಕೆ ಕಾರ್ಯಕ್ರಮಗಳ ಆಯೋಜನೆ ಇವೆಲ್ಲದಕ್ಕೂ ಪ್ರಯೋಗಶಾಲೆಯಾಗಿದ್ದು ಅದನ್ನು ಸಮಾಜದಲ್ಲಿ ಅಳವಡಿಸಿಕೊಂಡರೆ ನೀವು ಉಳಿದವರಿಗಿಂತ ಭಿನ್ನವಾಗಿರಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ರಣಜಿತ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕ ಶ್ರೀ ವೆಂಕಟೇಶ ಆಚಾರ್ಯ ವಂದಿಸಿದರು.ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಕು. ಶ್ವೇತ ಕಾರ್ಯಕ್ರಮ ನಿರೂಪಿಸಿದರು.