ಗಂಗೊಳ್ಳಿ(ನ,2): ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಗೂಡು ದೀಪ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನಟರಾಜ, ದ್ವಿತೀಯ ಸ್ಥಾನವನ್ನು ನಾಗಲಕ್ಷ್ಮಿ ಜಿ.ಎನ್ ಮತ್ತು ತೃತೀಯ ಸ್ಥಾನವನ್ನು ನಿಮಿಷ ಪಡೆದರು.

ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲದ ಗೌರವಾಧ್ಯಕ್ಷರಾದ ಭಾಸ್ಕರ್ ಎಚ್ ಜಿ ಬಹುಮಾನವನ್ನು ವಿತರಿಸಿದರು.










