ಹೆಮ್ಮಾಡಿ(ನ,06): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ), ಅಂಬಲಪಾಡಿ ಉಡುಪಿ ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇವರ ಸಹಯೋಗದೊಂದಿಗೆ ನ.06 ರಂದು ನೆಡದ ಸಾರ್ವಜನಿಕ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರದಲ್ಲಿ ಸುಮಾರು 470ಕ್ಕೂ ಅಧಿಕ ಜನರು ಪ್ರಯೋಜನ ಪಡೆದುಕೊಂಡರು.
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಲೋಹಿತಾಶ್ವ ಆರ್ ಕುಂದರ್ ರವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಂಘಟನೆ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.
ಮೊಗವೀರ ಮಹಜನಾ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರದ ಶಾಖಾಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ ನಿಯಮಿತ ಇದರ ಉಪಾಧ್ಯಕ್ಷರದ ಶರತ್ ಕುಮಾರ್ ಶೆಟ್ಟಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ, ಹೆಮ್ಮಾಡಿ ಇದರ ಅಧ್ಯಕ್ಷರಾದ ಭಾಸ್ಕರ್ ನಾಯ್ಕ್ ಕುಂಟನೇರ್ಲು, ಮೊಗವೀರ ಮಹಜನಾ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಕಾರ್ಯದರ್ಶಿಗಳಾದ ಪ್ರಭಾಕರ್ ಸೇನಾಪುರ, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರವೀಶ್ ಎಸ್ ಕೊರವಡಿ , ಕಟ್ ಬೇಲ್ತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರ ನಾಗರಾಜ ಪುತ್ರನ್, ಪ್ರಸಾದ್ ನೇತ್ರಾಲಯ ಉಡುಪಿಯ ಡಾI ಅರ್ಚನಾ ಶೆಟ್ಟಿ , ಹೆಮ್ಮಾಡಿ ಘಟಕದ ಗೌರವ ಅಧ್ಯಕ್ಷರಾದ ಉಮೇಶ್ ಬಡಾಕೆರೆ, ಸ್ತ್ರೀ ಶಕ್ತಿ ಬಗ್ವಾಡಿ ಹೋಬಳಿಯ ಅಧ್ಯಕ್ಷರಾದ ಸುಮಿತ್ರ ಆನಂದ್ ಮೊಗವೀರ ಉಪಸ್ಥಿತರಿದ್ದರು.
ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷರಾದ ರಾಜೀವ ಶ್ರೀಯಾನ್ ಗುಜ್ಜಾಡಿ ಸ್ವಾಗತಿಸಿದರು ಘಟಕದ ಕಾರ್ಯದರ್ಶಿ ಪ್ರವೀಣ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೃತರಾದ ಸಂಘಟನೆಯ ಸದಸ್ಯರಾದ ಸಂತೋಷ ನೆಂಪು ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.