ಕಾಕ೯ಳ(ನ,07): ಕಾಕ೯ಳ ತಾಲೂಕು ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಕಾಡಿನ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಂತಪ್ಪ ಪೂಜಾರಿ ಇವರ ಮನೆಗೆ ನ.07 ರಂದು ಸ್ವಾತಂತ್ರ್ಯ ಹೋರಾಟಗಾರರ ಮನೆ ಎನ್ನುವ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
” ಸ್ವರಾಜ್ಯ 75 ” ರ 19ನೇ ಮನೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಗೌರವ ಕಾಯ೯ದಶಿ೯ಯವರಾಗಿರುವ ಶ್ರೀ ನರೇಂದ್ರ ಕುಮಾರ್ ಕೋಟ ಇವರು ನಾಮ ಫಲಕ ಅನಾವರಣ ನೆರವೇರಿಸಿ ಮಾತನಾಡಿದರು.ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯನ್ನು ಮಾಡಿದ ನಂತರ ದೀಪ ಬೆಳಗಿಸುವ ಮೂಲಕ ವಿಶ್ವನಾಥ ನಾಯಕ್ ನಿವೃತ್ತ ಪೋಸ್ಟ್ ಮಾಸ್ಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ.ಸಾ.ಪ ಕಾಕ೯ಳ ತಾಲೂಕು ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರು.ಕಾಯ೯ಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪ್ರಕಾಶ್ ಮುನಿಯಾಲು ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರ ಕೊಡುಗೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮುಳ್ಕಾಡು ಸತೀಶ್ ಪೂಜಾರಿ ಊರಿನ ಹಿರಿಮೆಯ ಕುರಿತು ಮಾತನಾಡಿದರು.ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಶ್ರೀ ಆನಂದ ಪೂಜಾರಿ, ನಿವೃತ್ತ ಅಂಚೆ ಇಲಾಖೆಯ ಉದ್ಯೋಗಿ ಶ್ರೀ ವಿಶ್ವನಾಥ ನಾಯಕ್ ಶುಭಾಶಂಸನೆಗೈದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮುನಿಯಾಲು ಇದರ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಮಾರಿ ಸೌಪಣಿ೯ಕಾ ಬಸ್ರೂರು, ನೇತಾಜಿ ಸುಭಾಶ್ ಚಂದ್ರಭೋಷ್ ರ ಚಿತ್ರ ಬಿಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕಾಕ೯ಳ ತಾಲೂಕು ಘಟಕ,ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮುನಿಯಾಲು, ಕುಟುಂಬಸ್ಥರು ,ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ , ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಾದ ಚಂದ್ರ ಪೂಜಾರಿ,ಶೀಲಾ, ಮೀರಾ ಕುಟುಂಬಸ್ಥರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಾರ್ಯದರ್ಶಿ ಶ್ರೀ ಪ್ರದೀಪ್ , ಸಂಘದ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಮಂಜುನಾಥ ಟಿ, (ಜನಪ್ರಿಯ ರೈಸ್ ಕಾರ್ಪೊರೇಷನ್) , ಶ್ರೀ ಭಾಸ್ಕರ ಮಾಬಿಯಾನ್ ಮತ್ತಿತ್ತರ ಗಣ್ಯರು ಉಪಸ್ಧಿತರಿದ್ದರು.
ಸ್ವರಾಜ್ಯ 75 ರ ಕಾಯ೯ಕ್ರಮ ಸಂಚಾಲಕರಾದ ಶ್ರೀ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಸಿದರು. ಕುಮಾರಿ ಅನುಷ ಶೆಟ್ಟಿ ಇಡೂರು ಕಾಯ೯ಕ್ರಮ ನಿರೂಪಿಸಿ ಹಾಗೂ ಧನ್ಯವಾದಗೈದರು.