ಕುಂದಾಪುರ( ನ,7): ಇಲ್ಲಿನ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿ 1987 ರಿಂದ ಕುಂದಾ ಸರ್ಕ್ಯುಲೇಟಿಂಗ್ ಲೈಬ್ರರಿ ಎನ್ನುವ ಲೈಬ್ರರಿ ನಡೆಸುತ್ತಾ , ನೂರಾರು ಜನರಿಗೆ ಪುಸ್ತಕದ ರುಚಿ ಹತ್ತಿಸಿದ, ಅದರ ಮಾಲೀಕರಾದ ಶ್ರೀ ರಾಮ ದೇವಾಡಿಗರು (58) ನ.07 ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಮಾಸ್ತಿಕಟ್ಟೆ ಹತ್ತಿರ “ರಾಧಿಕಾ ಡ್ರೆಸ್ ಸೆಂಟರ್” ಅನ್ನುವ ಬಟ್ಟೆ ಅಂಗಡಿ ನಡೆಸಿ ಪ್ರಸಿದ್ಧರಾಗಿದ್ದ ಇವರು ಇತ್ತೀಚೆಗೆ ಹೊಸ ಅಂಗಡಿಗೆ ಸ್ಥಳಾಂತರಗೊಂಡಿದ್ದರು. ಕ್ರೀಡಾಪಟುವೂ ಆಗಿದ್ದ ರಾಮ ದೇವಾಡಿಗರು ಕಬಡ್ಡಿ ತೀರ್ಪುಗಾರೂ ಆಗಿದ್ದರು. ಅನೇಕ ಸಂಘ ಸಂಸ್ಥೆಗಳಿಗೆ ಪ್ರಾಯೋಜಕತ್ವ ನೀಡುತಿದ್ದ ಇವರು ಕುಂದಾಪುರದಲ್ಲಿ ದೇವಾಡಿಗ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.
ಮ್ರತರು ತಾಯಿ , ಪತ್ನಿ, ಇಬ್ಬರು ಪುತ್ರಿಯರು , ಸಹೋದರ, ಸಹೋದರಿ ಹಾಗೂ ಬಂಧುಗಳು , ಸಮಾಜ ಬಂಧುಗಳು , ಕ್ರೀಡಾಭಿಮಾನಿಗಳು ಹಾಗೂ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.