ಶಿರ್ವ(ನ,13): ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಚ್ಛತಾ ಶ್ರಮದಾನ- ಜನಾಂದೋಲನ ಕಾರ್ಯಕ್ರಮ ನ .12 ರಂದು ನಡೆಯಿತು.
ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೆಕ್ಷಣ ಗ್ರಾಮಿಣ–2022’ ಜನಾಂದೋಲನ ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಸುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆ ನೀಡಿದೆ.
ಇದರ ಪ್ರಯುಕ್ತ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಮತ್ತು ಅದನ್ನು ಸಮರ್ಪಕವಾಗಿ ತಮ್ಮ ಸುತ್ತಲ ಮನೆ, ಪರಿಸರಗಳಿಗೆ ಅನ್ವಯವಾಗುವಂತೆ ಕಾರ್ಯರೂಪಗೋಳಿಸುವಲ್ಲಿ ಸ್ವಚ್ಚತಾ ಸರ್ವೇಕ್ಷಣ ಪ್ರತಿಜ್ಞಾವಿಧಾನವನ್ನು ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ರವರು ನೆರವೇರಿಸಿ, ಸ್ವಚ್ಛತಾ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಲೇಜು ಎನ್.ಸಿ.ಸಿ ಘಟಕವನ್ನು ಶ್ಲಾಘಿಸಿ- ಶುಭ ಹಾರೈಸಿದರು. ಕ್ಯಾಡೆಟ್ ಪೂಜಾ ಶೆಟ್ಟಿ ಸ್ವಚ್ಛತೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು.ಎಲ್ಲಾ ಕ್ಯಾಡೆಟ್ಗಳು ಅಂಚೆ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪರಿಸರವನ್ನು ಸ್ವಚ್ಛಗೊಳಿಸಿದ್ದರು. ಎನ್.ಸಿ.ಸಿ ಜೂನಿಯರ್ ಅಂಡರ್ ಆಫೀಸರ್ ಲೋಬೋ ಆನ್ ರಿಯಾ ನೇವಿಲ್ ಧೀರಜ್ ಆಚಾರ್ಯ, ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ, ಕಾರ್ಪೊರಲ್ ರಿಯಾ ಸೇರಿನಾ ಡಿಸೋಜಾ ಹಾಗೂ ಕ್ಯಾಡೆಟ್ ಅನುಪ್ ನಾಯಕ್ , ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದ್ದರು.
ಈ ಕಾರ್ಯಕ್ರಮದಲ್ಲಿ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿಉಡುಪಿಯ ನೈಬ್ ಸುಬೇದಾರ್ ತೇಜೇಂದ್ರ ಕುಮಾರ್ , ಬಿ ಹೆಚ್ ಎಂ ರಾಜಾ ಸಾಬ್ ಎಚ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ, ಎಲ್ಲಾ ಕ್ಯಾಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ ಸೋನಾಲಿ ಕುಲಾಲ್ ಸ್ವಾಗತಿಸಿ, ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್ ವಂದಿಸಿದರು.ಲ್ಯಾನ್ಸ್ ಕಾರ್ಪೋರಲ್ ಶೆಟ್ಟಿಗಾರ ಹೇಮ ಶ್ರೀ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು.