ಕಲ್ಯಾಣಪುರ(ಡಿ.15): ಮಿಲಾಗ್ರಿಸ್ ಕಾಲೇಜಿನ 2022-23ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಜಿ . ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ಇದರ ಚೇರ್ಮನ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಹಣೆ ಬರಹಗಳನ್ನು ತಾವೇ ರೂಪಿಸಿಕೊಳ್ಳಬೇಕು. ಸರಳತೆಯೊಂದಿಗೆ ಜ್ಞಾನ, ಶಿಸ್ತು, ಹಾಗೂ ಜೀವನ ಪಾಠಗಳನ್ನು ಸಂಸ್ಥೆಯಿಂದ ಪಡೆದು ಉತ್ತಮ ಸಾಧನೆಗಳನ್ನು ಮಾಡಬೇಕು ಎಂದು ತಿಳಿಸಿದರು.ಗೌರವ ಅತಿಥಿಯಾಗಿ ಆಗಮಿಸಿದಂತಹ ಕಾಲೇಜಿನ ಹಳೆ ವಿದ್ಯಾರ್ಥಿ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಶ್ರೀ ಚೇತನ್ ಶೆಟ್ಟಿ ಇವರ ಉತ್ತಮ ಸಾಧನೆಗಾಗಿ ಸನ್ಮಾನಿಸಲಾಯಿತು. ಸನ್ಮಾನಗೊಂಡ ಇವರು ತನ್ನ ಉನ್ನತವಾದ ಸಾಧನೆಗೆ ಮಿಲಾಗ್ರಿಸ್ ಕಾಲೇಜಿನಲ್ಲಿ ದೊರಕಿರುವ ಮೌಲ್ಯಯುತವಾದ ಶಿಕ್ಷಣವು ಕಾರಣವೆಂದು ಆ ದಿನಗಳನ್ನು ಸ್ಮರಿಸಿಕೊಂಡರು. ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯೊಂದಿಗೆ ಪ್ರತಿಯೊಬ್ಬರೂ ಉನ್ನತವಾದ ಆದರ್ಶಗಳೊಂದಿಗೆ ಮುನ್ನಡೆಯಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ತೃತೀಯ ಬಿ ಎಸ್ಸಿ ವಿದ್ಯಾರ್ಥಿ ಕಾರ್ತಿಕ್ ಕುಮಾರ್ ಬಿ ಸ್ ತರಗತಿಯ ಪ್ರತಿನಿಧಿಗಳಿಗೆ ಪ್ರಮಾಣವಚನ ಭೋದಿಸಿದರು.ವೇದಿಕೆಯಲ್ಲಿ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸವಿತ ಕುಮಾರಿ, ಐಕ್ಯೂಎಸಿ ಸಂಯೋಜಕರಾದ ಡಾ. ಜಯರಾಂ ಶೆಟ್ಟಿಗಾರ್, ಮ್ಯಾನೇಜಿಂಗ್ ಕಮೀಟಿಯ ಉಪಾಧ್ಯಕ್ಷರಾದ ಶ್ರೀ ಜಾಫ್ರೇ ಡಯಾಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಗುಜ್ಜಾರ್ಬೆಟ್ಟು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರಾದ ಶ್ರೀ ಕಾರ್ತಿಕ್ ನಾಯಕ್ ಹಾಗೂ ಶ್ರೀಮತಿ ಹರಿಣಾಕ್ಸಿ ಎಂ ಡಿ ಉಪಸ್ಥಿತರಿದ್ದರು.
ಕಾಲೇಜಿನ ಏನ್ ಎಸ್ ಎಸ್ ತಂಡದವರಿಂದ ಪ್ರಾರ್ಥನೆ, ಶ್ರೀ ಕಾರ್ತಿಕ್ ನಾಯಕ್ ಅವರು ಸ್ವಾಗತಿಸಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತ್ರಿಶಾಡಿಸೋಜ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿ ತೃತೀಯ ಬಿಸಿಎ ಹಾಗೂ ಫ್ಲೇವನ್ ಪಿಕರ್ಡೋ ತೃತೀಯ ಬಿ. ಕಾo ಕಾರ್ಯಕ್ರಮವನ್ನು ನಿರೂಪಿಸಿದರು.