ಕುಂದಾಪುರ (ಡಿ,18); ಕುಂದಾಪುರದ ಕುವರಿ ಯೋಗ ಪಟು ದಿವ್ಯಾ ಶೆಟ್ಟಿ ಸತತ 20 ನಿಮಿಷಗಳ ಕಾಲ ಪದ್ಮಾ ಶಿರ್ಶಾಸನವನ್ನು ಯಶಸ್ವಿಯಾಗಿ ಪ್ರದರ್ಶನ ನೀಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆಗೈದಿದ್ದಾರೆ.
ನವೆಂಬರ್ 30 ರಂದು ಬೆಂಗಳೂರಿನಲ್ಲಿ ನಡೆದ GWR-GLOBAL WORLD RECORD ಯೋಗ ಪ್ರದರ್ಶನದಲ್ಲಿ ಭಾಗಿಯಾಗಿ ಈ ಸಾಧನೆಗೈದಿದ್ದಾರೆ. ಇವರು ಕುಂದಾಪುರದ ಡಾIಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಯಾಗಿದ್ದಾರೆ.