ಕೊಲ್ಲೂರು(ಡಿ,23): ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ2022-23 ನೇ ಶೈಕ್ಷಣಿಕ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಡಾ. ಅತುಲ್ ಕುಮಾರ ಶೆಟ್ಟಿ ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸುಖ ದು;ಖಗಳನ್ನು ಸಮಾನವಾಗಿ ಸ್ವೀಕರಿಸಿ ಎಲ್ಲರೊಂದಿಗೆ ಬೆರೆತು ಬಾಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರಾಡಿ ಚಂದ್ರಶೇಖರ ಶೆಟ್ಟಿ ವಹಿಸಿಕೊಂಡು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ತಮ್ಮ ಹೆತ್ತವರ ಶ್ರಮವನ್ನು ಅರಿತು ಅವರಿಗೆ ಮತ್ತು ಕಾಲೇಜಿಗೆ ನಿಷ್ಠರಾಗಿಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ದೇವಳದ ಕಾರ್ಯನಿರ್ವಾಹಣಾಧಿಕಾರಿಗಳಾದ ಎಸ್.ಪಿ.ಬಿ ಮಹೇಶ್, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಾನಂದ ಹೋಬಳಿದಾರ್, ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸಂದೀಪ್ ಆರ್, ಕೊಲ್ಲೂರು ಪ್ರೌಢಶಾಲಾ ಮೂಖ್ಯೋಪಾಧ್ಯಾಯರಾದ ನಾಗರಾಜ್ ಭಟ್, ಶ್ರೀ ದೇವಳದ ಶೈಕ್ಷಣಿಕ ವಿಭಾಗದ ಕಛೇರಿ ಸಹಾಯಕರಾದ ವಿಘ್ನರಾಜ್ ಭಟ್, ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಗೋಪಾಲ ದೇವಾಡಿಗ, ಪ್ರಥಮ ದರ್ಜೆ ಸಹಾಯಕರಾದ ದಿನಕರ ಶೆಟ್ಟಿ, ವಸತಿ ಮೇಲ್ವಿಚಾರಕರಾದ ಅರುಣ್ ಕೊಠಾರಿ, ಹಾಗೂ ಯತೀಶ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ವಾಸುದೇವ ಉಡುಪ ಹಾಗೂ ಜ್ಯೋತಿ ಎ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾದ ರಾಮನಾಯ್ಕ ಕೆ.ಬಿ ವಂದಾನಾರ್ಪಣೆಗೈದರು. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪಟ್ಟಿಯನ್ನು ಉಪನ್ಯಾಸಕರಾದ ನಾಗರಾಜ ಅಡಿಗ ನೀಲಾವರ ಹಾಗೂ ಕ್ರೀಡಾ ವಿಭಾಗದ ಬಹುಮಾನ ವಿತರಣಾ ಪಟ್ಟಿಯನ್ನು ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುಕೇಶ್ ಶೆಟ್ಟಿ ಹೊಸಮಠ ವಾಚಿಸಿದರು. ರಾಷ್ಟ್ರ ಮಟ್ಟದ ಪ್ಲೋರ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ಶ್ವೇತಾ, ಮಹಾಲಕ್ಷ್ಮೀ ,ಛಾಯ, ಕೀರ್ತನಾ ಹಾಗೂ ರಚನಾ (ಬೆಸ್ಟ್ ಅವ್ಟ್ ಗೋಯಿಂಗ್ ಸ್ಟೂಡೇಂಟ್ ಅವಾರ್ಡ್), ಸಚಿನ್ (ಬೆಸ್ಟ್ ಅವ್ಟ್ ಗೋಯಿಂಗ್ ಲಿಡರ್ ಅವಾರ್ಡ್), ಮಲ್ಲೇಶ್ (ಬೆಸ್ಟ್ ಅವ್ಟ್ ಗೋಯಿಂಗ್ ಎನ್.ಎಸ್.ಎಸ್ ಸ್ಟೂಡೇಂಟ್ ಅವಾರ್ಡ್), ಶ್ವೇತಾ (ಬೆಸ್ಟ್ ಅವ್ಟ್ ಗೋಯಿಂಗ್ ಸ್ಟೋಟ್ಸ್ ಸ್ಟುಡೇಂಟ್ ಅವಾರ್ಡ್) ನೀಡಿ ಸನ್ಮಾನಿಸಿ ಗೌರವಿಸಲಾಯಿತು.