ಕುಂದಾಪುರ:(ಜ,02): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ‘ನಿರ್ಮಲ ನಗರ ಅಭಿಯಾನ’ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಉಪ್ಪುಂದದ ಶಾಲೆಬಾಗಿಲಿನಿಂದ ಬಿಜೂರಿನ ಗ್ರಾಮ ಪಂಚಾಯತ್ ವರೆಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ನಗರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವ ಕುರಿತು ಘೋಷವಾಕ್ಯಗಳನ್ನು ಹೇಳುವುದರ ಜೊತೆಗೆ ಎನ್.ಎಸ್.ಎಸ್. ಸ್ವಯಂ ಸೇವಕರು ಸ್ವಚ್ಛತೆಯಲ್ಲಿ ತೊಡಗಿದರು.
ಲಯನ್ಸ್ ಕ್ಲಬ್ ನಾವುಂದದ ಕಾರ್ಯದರ್ಶಿ ಶ್ರೀ ದಿನೇಶ್ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಿಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ರಮೇಶ್ ಬಿ. ದೇವಾಡಿಗ, ಕಾರ್ಯದರ್ಶಿ ನಾಗೇಶ್ ದೇವಾಡಿಗ, ಜೆ.ಸಿ.ಐ. ಉಪ್ಪುಂದದ ಅಧ್ಯಕ್ಷ ಶ್ರೀ ನಾಗರಾಜ ಪೂಜಾರಿ, ಕಾರ್ಯದರ್ಶಿ ಶ್ರೀ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶ್ರೀ ಸಂತೋಷ್ ಕುಮಾರ್ ಬವಳಾಡಿ, ಶ್ರೀ ನಾಗರಾಜ ಪೂಜಾರಿ, ಶ್ರೀ ರಾಜು. ಬಿ. ದೇವಾಡಿಗ, ಜಾಥಾದ ಸಂಯೋಜಕರಾದ ಶ್ರೀ ವೀರೇಂದ್ರ ಶೆಟ್ಟಿ ಗಂಟಿಹೊಳೆ, ವಕೀಲರಾದ ಶ್ರೀ ವಿಶ್ವನಾಥ ಶೆಟ್ಟಿ ಗಂಟಿಹೊಳೆ, ಶಿಬಿರಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಹ ಶಿಬಿರಾಧಿಕಾರಿ ದೀಪಾ ಪೂಜಾರಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಉಪನ್ಯಾಸಕ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಉಪಸ್ಥಿತರಿದ್ದರು. ಸ್ವಯಂ ಸೇವಕ ಸಂಪತ್ ಶೆಟ್ಟಿ ನಿರೂಪಿಸಿದರು.
ಲಯನ್ಸ್ ಕ್ಲಬ್ ನಾವುಂದ, ಗ್ರಾಮ ಪಂಚಾಯತ್ ಬಿಜೂರು ಹಾಗೂ ಜೆ.ಸಿ.ಐ. ಉಪ್ಪುಂದದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.