ಕುಂದಾಪುರ(ಜ,12): ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ ಡ್ ಅಕೌಂಟೆoಟ್ಸ್ ಆಫ್ ಇಂಡಿಯ ನವೆಂಬರ್ 2022 ರಲ್ಲಿ ನೆಡೆಸಿದ ಸಿಎ ಇಂಟರ್ಮೀಡಿಯೇಟ್ ಮತ್ತು ಸಿಎ ಅಂತಿಮ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊo ದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಯಾದ ವೆಂಕಟೇಶ್ ಪುರಾಣಿಕ್(526) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಾತ್ವಿಕ್ (202), ಸಚಿನ್ (226) ಸಿಎ ಅಂತಿಮ ಪರೀಕ್ಷೆಯ ಮೊದಲನೇ ಹಂತ ಮತ್ತು ಷಣ್ಮುಖ(236) ಅಂತಿಮ ಪರೀಕ್ಷೆಯ ಎರಡನೇಯ ಹಂತದಲ್ಲಿ ತೇರ್ಗಡೆ ಹೊಂದಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ಆನುಷ್ಕ ಕುಂದರ್(545) ಸಂಸ್ಥೆಗೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಮತ್ತು ಎನ್. ಅಕ್ಷಯ್ ಕಾಮತ್(215), ಕಿರಣ್ ಕಾಮತ್(237),ಅಂಕಗಳೊoದಿಗೆ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಅಂತಿಮ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಕ್ಷಿತಾ(258), ರಾಮನಾಥ್ ಶೆಣೈ(244), ಅರ್ಪಣ್ ಪೂಜಾರಿ (242), ಅನಿಕೇತ್ ಕೆದ್ಲಾಯ(231), ಸುಹಾಸಿನಿ(227), ಶಯನ್ ಶೆಟ್ಟಿ (224), ಅಮೃತ ಕೆ. (223), ಅದಿತ್ಯ ದೇವಾಡಿಗ(215), ಚೇತನ (214) ನಾದಶ್ರೀ(212), ಹರ್ಷ ಕುಂದರ್(211), ಪ್ರಿಯಾ ಶೆಟ್ಟಿ (210), ಭುವನ್ರಾಜ್ ಶೆಟ್ಟಿ (210), ಸೌಮ್ಯ209), ಹರೀಶ್ ಎಮ್. ನಾಯಕ್ (209), ಭರತ್ಕುಮಾರ್ ಶೆಟ್ಟಿ(203), ಅಜಿತ್ ಕಿಣಿ(200), ವೈಷ್ಣವಿ ಶೆಟ್ಟಿ (200) ಸಿಎ ಇಂಟರ್ಮೀಡಿಯೇಟ್ ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಹೆಮ್ಮೆ ವ್ಯಕ್ತಪಡಿಸಿದೆ. ’ನಮ್ಮ ಅನೇಕ ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದನ್ನು ನೋಡಿ ನಾವು ಸಂತಸಗೊಂಡಿದ್ದೇವೆ. ಇದು ನಮ್ಮ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮ , ತರಬೇತಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಅಕಾಡೆಮಿಯು ವಾಣಿಜ್ಯ ವಿಭಾಗದ ವೃತ್ತಿಪರ ಶಿಕ್ಷಣಕ್ಕೆ ತರಬೇತಿಯನ್ನು ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಸಿಎ/ಸಿಎಸ್ ಶಿಕ್ಷಣದಲ್ಲಿ ತಮ್ಮ ಗುರಿಯನ್ನು ಸಾಧಿಸಲು ಮತ್ತು ಅವರ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಅವಿರತವಾಗಿ ಕಾರ್ಯನಿರ್ವಹಿಸುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಶೇಕಡ 21.92 ಫಲಿತಾಂಶ ಬಂದಿದ್ದು, ಶಿಕ್ಷಪ್ರಭ ಅಕಾಡೆಮಿಯ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಫಲಿತಾಂಶ ಶೇಕಡ 41 ಬoದಿರುವುದು ಹೆಮ್ಮೆಯ ವಿಷಯ’ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
“ ನನ್ನ ಮೊದಲ ಪ್ರಯತ್ನದಲ್ಲಿಯೇ `100% ಪರಿಶ್ರಮ ಹಾಕಿ ಪಾಸ್ ಆಗುವ ಗುರಿ ಇರಿಸಿಕೊಂಡಿದ್ದೆ. ನನ್ನ ಪ್ರಯತ್ನದ ಜೊತೆಯಲ್ಲಿ, ದೇವರ, ಗುರುಹಿರಿಯರ ಆಶೀರ್ವಾದ ಹಾಗೂ ಶಿಕ್ಷಪ್ರಭ ಅಕಾಡೆಮಿಯವರ ಮಾರ್ಗದರ್ಶನ ನನ್ನ ಈ ಯಶಸ್ಸಿಗೆ ಕಾರಣ.
ನನ್ನ ವಿದ್ಯಾಭ್ಯಾಸಕ್ಕೆ ಎಲ್ಲೂ ತೊಂದರೆ ಆಗದಂತೆ, ಅನುಕೂಲಕರ ವಾತವರಣವನ್ನು ಕಲ್ಪಿಸಿ, ಗೆಲುವು-ಸೋಲು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸೋಣ ಎಂದು ಧೈರ್ಯ ತುಂಬಿದ ನನ್ನ ಪೋಷಕರಿಗೆ ಸದಾ ಚಿರಋಣಿ.”
ವೆಂಕಟೇಶ್ ಪುರಾಣಿಕ್
(526 ಅಂಕ)
ಸಿಎ ಅಂತಿಮ ಹಂತದ ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿ
“ಪೋಷಕರು ಹಾಗೂ ಶಿಕ್ಷ ಪ್ರಭಾ ಅಕಾಡೆಮಿಯ ಬೋಧಕರ ನೆರವಿನಿಂದ ಈ ಯಶಸ್ಸನ್ನು ಕಂಡಿದ್ದೇನೆ.. ಹಲವು ತಿಂಗಳ ಪರಿಶ್ರಮದ ಜೊತೆಗೆ ಬೋಧಕರ ಪ್ರೋತ್ಸಾಹದಿಂದ ಇಷ್ಟು ಅಂಕ ಗಳಿಸಿದ್ದೇನೆ.. ನನಗೆ ಬೆನ್ನೆಲುವಾಗಿ ನಿಂತ ಶಿಕ್ಷ ಪ್ರಭಾ ಸಂಸ್ಥೆ, ನನ್ನ ಪೋಷಕರು ಹಾಗೂ ಗೆಳೆಯರಿಗೆ ನಾನು ಚಿರರುಣಿಯಾಗಿದ್ದೇನೆ”
ಅನುಷ್ಕ ಕುಂದರ್
(545 ಅಂಕ)
ಸಂಸ್ಥೆಗೆ ಅತ್ಯಧಿಕ ಅಂಕ ಗಳಿಸಿದ
ವಿದ್ಯಾರ್ಥಿ














