ಕುoದಾಪುರ(ಜೂ,12): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರತೀಕ್ ಎನ್. ಶೆಟ್ಟಿ ಇವನು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 616 ಅಂಕ ಗಳಿಸಿದ್ದು ಮರುಮೌಲ್ಯಮಾಪನದ ನಂತರ 620 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿರುತ್ತಾನೆ.
ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 4 ಹೆಚ್ಚುವರಿ ಅಂಕ ಗಳಿಸುವುದರೊಂದಿಗೆ ಈ ಸಾಧನೆ ಮಾಡಿರುತ್ತಾನೆ. ಈತ ಮಾರ್ಕೋಡು ಕೋಟೇಶ್ವರದ ಕೆ. ನಾರಾಯಣ ಶೆಟ್ಟಿ ಮತ್ತು ತಿಲಕಾ ಎನ್. ಶೆಟ್ಟಿಯವರ ಸುಪುತ್ರ.