ಕುಂದಾಪುರ( ಸೆ .15): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ವೈಯಕ್ತಿಕ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘Good Touch–Bad Touch’ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಾಗಾರದಲ್ಲಿ ಸಮಾಲೋಚಕಿ ಹಾಗೂ ಯೋಗ ತರಬೇತುದಾರ್ತಿ ಶ್ರೀಮತಿ ಭಾರತಿ ಅವರು ಮಕ್ಕಳಿಗೆ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶದ ಕುರಿತು ಸರಳವಾಗಿ ವಿವರಿಸಿದರು. ತಮ್ಮ ದೇಹದ ಬಗ್ಗೆ ಜಾಗೃತಿ ಹೊಂದುವುದು, ಅಸೌಕರ್ಯ ಉಂಟುಮಾಡುವ ಸ್ಪರ್ಶವನ್ನು ಗುರುತಿಸುವುದು ಹಾಗೂ ಅಂತಹ ಸಂದರ್ಭಗಳಲ್ಲಿ ವಿಶ್ವಾಸಾರ್ಹ ಹಿರಿಯರೊಂದಿಗೆ ಮಾತನಾಡುವ ಮಹತ್ವವನ್ನು ತಿಳಿಸಿದರು.
ಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಧೈರ್ಯದಿಂದ ಮಾತನಾಡಬೇಕು ಮತ್ತು ಯಾವುದೇ ಅಸಹಜ ಪರಿಸ್ಥಿತಿಯನ್ನು ಮೌನವಾಗಿ ಸಹಿಸಿಕೊಳ್ಳಬಾರದು ಎಂಬ ಸಂದೇಶವನ್ನು ನೀಡಲಾಯಿತು. ಶಿಕ್ಷಕಿ ಶೈಲಾ ಶಾಲೆಟ್ ನಿರೂಪಿಸಿ ವಂದಿಸಿದರು.










