ಕುಂದಾಪುರ (ಜು,4): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘ ಹಾಗೂ ಕನ್ನಡ ಸಂಘದ ವಿದ್ಯಾರ್ಥಿ ಗಳಿಂದ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮವನ್ನು ಜೂನ್ 26ರಂದು ಕೊಳ್ಕೆಬೈಲ್ ಸೂರಪ್ಪ ಶೆಟ್ಟಿ ಸರ್ಕಾರಿ ಪ್ರೌಢಶಾಲೆ, ಹಕ್ಲಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕುಂದಗನ್ನಡ ಸಂಘ ಹಾಗೂ ಕನ್ನಡ ಸಂಘದ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಹಕ್ಲಾಡಿ ಪ್ರೌಢಶಾಲೆಯ ವಿದ್ಯರ್ಥಿಗಳ ಸಹಯೋಗದೊಂದಿಗೆ ಅನೇಕ ಪಠ್ಯೇತರ ಕರ್ಯ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ ಎಸ್., ಕನ್ನಡ ಶಿಕ್ಷಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ಹಾಗೂ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಕುಂದಗನ್ನಡ ಸಂಘದ ಸಂಯೋಜಕರಾದ ಸುಕುಮಾರ್ ಶೆಟ್ಟಿ ಕಮಲಶಿಲೆ, ವಿನಯ ವಿ. ಶೆಟ್ಟಿ, ಕನ್ನಡ ಸಂಘದ ಸಂಯೋಜಕರಾದ ಶ್ರೀಮತಿ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.