ಕುಂದಾಪುರ(ಆ,11): ಇಲ್ಲಿನ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿ ಟಿ ಯ ವತಿಯಿಂದ ‘ ನ್ಯಾಷನಲ್ ಲೆವೆಲ್ ಟ್ಯಾಲೆಂಟ್ ಸರ್ಚ್ ‘ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪರೀಕ್ಷಾ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿ, ಜೆಸಿ.ಐ ಕುಂದಾಪುರ ಸಿಟಿ ಯ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ, ಸ್ಥಾಪಕ ಅಧ್ಯಕ್ಷರಾದ ಜೆಸಿ ಹುಸೇನ್ ಹೈಕಾಡಿ, ಜೆಸಿ ರಾಜೇಶ್ ಹೆಬ್ಬಾರ್, ಮಹಿಳಾ ಜೆಸಿ ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ, ಜೆಸಿ ಅನಿತಾ ಡಿಸೋಜಾ ರವರು ಉಪಸ್ಥಿತರಿದ್ದರು.